HomePage_Banner
HomePage_Banner
HomePage_Banner
Breaking News

ಯುವವಾಹಿನಿ ಪುತ್ತೂರು ಘಟಕ, ತಾ|ಬಿಲ್ಲವ ವಿದ್ಯಾರ್ಥಿ ಸಂಘದಿಂದ ಯುವ ಮನಸ್ಸುಗಳ ಸಮ್ಮಿಲನ `ಬಾಂಧವ್ಯ’-ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುವವಾಹಿನಿ ಪುತ್ತೂರು ಘಟಕ, ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪುತ್ತೂರು-ಬಪ್ಪಳಿಗೆ ಬಿಲ್ಲವ ಸಂಘದಲ್ಲಿ ಜರಗುವ ಕುಟುಂಬ ಸಮ್ಮಿಲನ `ಬಾಂಧವ್ಯ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಜೂ.18 ರಂದು ಪುತ್ತೂರು ಬಿಲ್ಲವ ಸಂಘದಲ್ಲಿ ನಡೆಯಿತು.

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಜಯಂತ್ ನಡುಬೈಲು ಹಾಗೂ ಯುವವಾಹಿನಿ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಶೀನಪ್ಪ ಪೂಜಾರಿರವರು ಜೊತೆಗೂಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಜಯಂತ್ ನಡುಬೈಲುರವರು, ಯುವವಾಹಿನಿ ಪುತ್ತೂರು ಘಟಕ ಹಾಗೂ ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘವು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಿಲ್ಲವ ಸಮುದಾಯದ ಮನ ಗೆದ್ದಿದ್ದಾರೆ. ಇದೀಗ ಬಿಲ್ಲವ ಸಮುದಾಯದ ಕುಟುಂಬದ ಹಾಗೂ ಯುವ ಮನಸ್ಸುಗಳ ಬಾಂಧವ್ಯವನ್ನು ಹೆಚ್ಚಿಸಲು ಬಾಂಧವ್ಯ ಹೆಸರಿನಲ್ಲಿ ವಿಶೇಷವಾದ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಬಿಲ್ಲವ ಸಮುದಾಯದ 52 ಗ್ರಾಮದ ಪ್ರತಿಯೋರ್ವ ಬಿಲ್ಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕು ಎಂದು ಅವರು ಹೇಳಿದರು.

ಯವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಕಾರ್ಯದರ್ಶಿ ಪ್ರಶಾಂತ್ ಪಲ್ಲತ್ತಡ್ಕ, ತಾಲೂಕು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೌಶಿಕ್, ಕಾರ್ಯದರ್ಶಿ ಪ್ರಿಯಾಶ್ರೀ, ಯುವವಾಹಿನಿ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಹರೀಶ್ ಶಾಂತಿ, ಮಾಜಿ ಅಧ್ಯಕ್ಷರಾದ ಉದಯ ಪೂಜಾರಿ ಕೋಲಾಡಿ, ಜಯಂತ್ ಬಾಯಾರು, ಜಯಂತ್ ಕೆಂಗುಡೇಲು, ಚಂದ್ರಕಾಂತ ಶಾಂತಿವನ, ಹೊನ್ನಪ್ಪ ಪೂಜಾರಿ ಕೈಂದಾಡಿ, ಚಂದ್ರಶೇಖರ್ ಎನ್.ಎಸ್.ಡಿ, ಯುವವಾಹಿನಿ ಜೊತೆ ಕಾರ್ಯದರ್ಶಿ ರವೀಂದ್ರ ಪೂಜಾರಿ ಸಂಪ್ಯ, ಉಪಾಧ್ಯಕ್ಷ ಬಾಬು ಪೂಜಾರಿ ಇದ್ಪಾಡಿ, ನಿರ್ದೇಶಕರಾದ ಹರೀಶ್ ಬಂಗೇರ, ನವೀನ್ ಕಲ್ಲಗುಡ್ಡೆ, ಯತೀಶ್ ಕುಮಾರ್ ಬಲ್ನಾಡು, ಪ್ರಜ್ವಲ್, ಚೈತ್ರಾ ಬಂಗೇರ, ಸದಸ್ಯರಾದ ನಿಶ್ಮಿತಾ, ವಿಶ್ವಜಿತ್ ಅಮ್ಮುಂಜೆ, ಅನಿಲ್ ಕುಮಾರ್ ಒತ್ತೆಮುಂಡೂರು, ಅಕ್ಷಯ್ ನಡುಬೈಲುರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಯುವವಾಹಿನಿ ವಾರ್ಷಿಕ ಸಮಾವೇಶದ ನಿರ್ದೇಶಕ ಶಶಿಧರ್ ಕಿನ್ನಿಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಜೂ.23: ಯುವ ಮನಸ್ಸುಗಳ `ಬಾಂಧವ್ಯ’….
ಜೂ.23 ರಂದು ಅಪರಾಹ್ನ ಪುತ್ತೂರು ಬಿಲ್ಲವ ಸಂಘದ ಸಭಾಭವನದಲ್ಲಿ ಯುವ ಮನಸ್ಸುಗಳ `ಬಾಂಧವ್ಯ’ ಕಾರ್ಯಕ್ರಮದ ಉದ್ಘಾಟನೆಯು ಜರಗಲಿದೆ. ಬಳಿಕ ಸಂಪನ್ಮೂಲ ವ್ಯಕ್ತಿ ಡಾ|ರಾಜೇಶ್ ಬೆಜ್ಜಂಗಳರವರು ಮಾತು, ಹರಟೆ, ಆಟವನ್ನೊಳಗೊಂಡ `ಯುವ ಮನಸ್ಸುಗಳು’ ಕಾರ್ಯಕ್ರಮ ನಡೆಸಿಕೊಡಲಿರುವರು. ಸಂಜೆ ವಿಠಲ ನಾಯಕ್ ಕಲ್ಲಡ್ಕರವರಿಂದ `ಸಂಸಾರ’, ದಿನೇಶ್ ಸುವರ್ಣ ರಾಯಿ ನಡೆಸಿಕೊಡುವ ಹಾಸ್ಯ, ನೃತ್ಯ, ಮನೋರಂಜನಾ ಆಟಗಳು ಕಾರ್ಯಕ್ರಮದಲ್ಲಿ ಮುದವನ್ನು ಹೆಚ್ಚಿಸಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.