ತಾಲೂಕಿನಲ್ಲಿ 7405 ರೈತರಿಗೆ ಬಾಕಿ
ಪುತ್ತೂರು ತಾಲೂಕಿನಿಂದ ಒಟ್ಟು 11915 ಮಂದಿ ರೈತರ 91.14ಕೋಟಿ ಸಾಲ ಮನ್ನಾಕ್ಕೆ ಬೇಡಿಕೆಯಿತ್ತು. ಈ ಪೈಕಿ 4510 ಮಂದಿ ರೈತರಿಗೆ ರೂ.32.01ಕೋಟಿ ಸಾಲ ಮನ್ನಾದ ಮೊತ್ತ ಬಿಡುಗಡೆಯಾಗಿದೆ. 7405ರೈತರಿಗೆ ರೂ.59.13ಕೋಟಿ ಮೊತ್ತ ಸಾಲ ಮನ್ನಾದ ಹಣ ಬಿಡುಗಡೆಯಾಗಲು ಬಾಕಿಯಿಂದೆ.
ಪುತ್ತೂರು:ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು 2018ರಲ್ಲಿ ಘೋಷಿಸಿದ ರೈತರ ರೂ.1ಲಕ್ಷ ಬೆಳೆ ಸಾಲ ಮನ್ನಾದಲ್ಲಿ ಜಿಲ್ಲೆಯಲ್ಲಿ 25,598 ಮಂದಿ ರೈತರಿಗೆ ರೂ.181.65 ಕೋಟಿ ಸಾಲ ಮನ್ನಾದ ಹಣ ಬಿಡುಗಡೆಯಾಗಿದೆ. ಉಳಿದಂತೆ 42.026 ಮಂದಿ ರೈತರಿಗೆ ರೂ.344.80ಕೋಟಿ ಹಣ ಬಿಡುಗಡೆಯಾಗಲು ಬಾಕಿಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯಲ್ಲಿ 2018ರ ಜುಲೈ 10ಕ್ಕೆ ಒಟ್ಟು 67,624 ಮಂದಿ ಫಲಾನುಭವಿಗಳ ಒಟ್ಟು ರೂ.830.24 ಕೋಟಿ ಸಾಲ ಹೊರಬಾಕಿಯಿತ್ತು. 67,624 ಮಂದಿ ರೈತರಿಗೆ ಒಟ್ಟು ರೂ.526.45 ಕೋಟಿ ಸಾಲಮನ್ನಾ ಮಾಡುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ. ಈ ಪೈಕಿ 25,598 ಮಂದಿ ರೈತರ ರೂ.181.65ಕೋಟಿ ಸಾಲ ಮನ್ನಾವಾಗಿದ್ದು 42,026 ಮಂದಿ ರೈತರ ರೂ.344.80ಕೋಟಿ ಸಾಲ ಮನ್ನಾ ಮೊತ್ತ ಬಿಡುಗಡೆಯಾಗಲು ಬಾಕಿಯಿದೆ. ಸಾಲಮನ್ನಾ ಹಣವು ಅಪೆಕ್ಸ್ ಬ್ಯಾಂಕ್ ಮೂಲಕ ಡಿಸಿಸಿ ಬ್ಯಾಂಕ್ಗೆ ವರ್ಗಾವಣೆಯಾಗಿ ಅಲ್ಲಿಂದ ರೈತರ ಖಾತೆಗೆ ಜಮೆ ಆಗುತ್ತಿದೆ.
67,624 ಮಂದಿ ರೈತರ ಸಾಲ ಮನ್ನಾ ಬೇಡಿಕೆ: ಸಾಲಮನ್ನಾಕ್ಕಾಗಿ ಮಂಗಳೂರಿನಿಂದ 1520ಮಂದಿ ರೈತರ ರೂ.10.92ಕೋಟಿ, ಮೂಡಬಿದ್ರೆಯ 2282 ಮಂದಿ ರೈತರ 17.16ಕೋಟಿ, ಬಂಟ್ವಾಳದ 14,412 ಮಂದಿ ರೈತರ ರೂ.109.77ಕೋಟಿ, ಪುತ್ತೂರಿನ 11915 ಮಂದಿ ರೈತರ 91.14ಕೋಟಿ, ಕಡಬದ 6420ಮಂದಿ ರೈತರ 49.07ಕೋಟಿ, ಸುಳ್ಯದ 14,114 ಮಂದಿ ರೈತರ 118.12ಕೋಟಿ ಹಾಗೂ ಬೆಳ್ತಂಗಡಿಯ 16,961 ಮಂದಿ ರೈತರ ರೂ.130.27ಕೋಟಿ ಹಣ ಮನ್ನಾ ಮಾಡುವ ಬೇಡಿಕೆ ಸಲ್ಲಿಸಲಾಗಿತ್ತು.
25,598 ಮಂದಿಗೆ ಪಾವತಿ: ಮಂಗಳೂರಿನ 575 ಮಂದಿ ರೈತರಿಗೆ ರೂ.3.99ಕೋಟಿ, ಮೂಡಬಿದರೆಯ 864 ರೈತರಿಗೆ ರೂ.6.12ಕೋಟಿ, ಬಂಟ್ವಾಳದ 5455 ರೈತರಿಗೆ ರೂ.38.82ಕೋಟಿ, ಪುತ್ತೂರಿನ 4510 ರೈತರಿಗೆ ರೂ.32.01ಕೋಟಿ, ಕಡಬದ 2430ಮಂದಿ ರೈತರಿಗೆ ರೂ.17.24ಕೋಟಿ, ಸುಳ್ಯದ 5343 ರೈತರಿಗೆ ರೂ.37.91ಕೋಟಿ ಹಾಗೂ ಬೆಳ್ತಂಗಡಿಯ 6421 ರೈತರಿಗೆ ರೂ.45.56ಕೋಟಿ ಮೊತ್ತ ಸಾಲಮನ್ನಾಕ್ಕಾಗಿ ಸರಕಾರ ಬಿಡುಗಡೆ ಮಾಡಿದೆ.
42,026 ಮಂದಿಗೆ ಬಾಕಿ: ಮಂಗಳೂರಿನಿಂದ 945 ಮಂದಿ ರೈತರ ರೂ.6.93ಕೋಟಿ, ಮೂಡಬಿದ್ರೆಯ 1418 ಮಂದಿ ರೈತರ ರೂ. 11.04ಕೋಟಿ, ಬಂಟ್ವಾಳದ 8957 ಮಂದಿ ರೈತರ ರೂ.70.95ಕೋಟಿ, ಪುತ್ತೂರಿನ 7405ಮಂದಿ ರೈತರ 59.13ಕೋಟಿ, ಕಡಬದ 3990 ಮಂದಿ ರೈತರ ರೂ.31.83 ಕೋಟಿ, ಸುಳ್ಯದ 8771 ಮಂದಿ ರೈತರ ರೂ.80.21ಕೋಟಿ ಹಾಗೂ ಬೆಳ್ತಂಗಡಿಯ 10,540 ಮಂದಿ ರೈತರ ರೂ.84.71ಕೋಟಿ ಹಣ ಸಾಲಮನ್ನಾದ ಮೊತ್ತ ಬಿಡುಗಡೆಯಾಗಲು ಬಾಕಿಯಿದೆ.
ಸಂಮಿಶ್ರ ಸರಕಾರ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿಲ್ಲ. ಇದರಿಂದಾಗಿ ಸಾಲಮನ್ನಾ ಯೋಜನೆಯಲ್ಲಿ ಇನ್ನೂ ರೈತರಿಗೆ ಸೌಲಭ್ಯ ಸಿಕ್ಕಿಲ್ಲ. ಜೊತೆಗೆ ಅರ್ಹ ರೈತ ಫಲಾನುಭವಿಗಳಿಗೂ ಸಹಕಾರ ಸಂಘದ ಮೂಲಕ ಸಾಲವೂ ಸಿಗುತ್ತಿಲ್ಲ. ಈ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ -ಸಂಜೀವ ಮಠಂದೂರು, ಶಾಸಕರು ಪುತ್ತೂರು
ರೈತರ ಬೆಳೆ ಸಾಲ ಮನ್ನಾದಲ್ಲಿ ಈಗಾಗಲೇ ರೂ.181.65 ಬಿಡುಗಡೆಯಾಗಿ ರೈತರ ಖಾತೆಗಳಿಗೆ ಜಮೆಯಾಗಿದೆ. ಮೇ.ಅಂತ್ಯದ ವೇಳೆಗೆ ಸರಕಾರ ಮತ್ತೆ ರೂ.105ಕೋಟಿ ಬಿಡುಗಡೆ ಮಾಡಿದೆ. ಬೆಳೆ ಸಾಲ ಪಡೆದು ಪಾವತಿಸಲು ಬಾಕಿಯಿರುವ ಸಾಲ ಮನ್ನಾದ ಅರ್ಹ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಂತಹ ರೈತರಿಗೆ ಹೊಸ ಸಾಲ ಪಡೆಯುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಅರ್ಹ ಫಲಾನುಭವಿ ರೈತರಿಗೆ ಹೊಸ ಸಾಲ ಪಡೆಯಲು ಅವಕಾಶ ನೀಡಲಾಗಿದೆ -ಸುರೇಶ್ ಗೌಡ, ಜಿಲ್ಲಾ ಉಪನಿಬಂಧಕರು, ಸಹಕಾರಿ ಇಲಾಖೆ