ಸಾಮಾಜಿಕ ಜಾಲತಾಣದ ದುರುಪಯೋಗ ಮಾಡುವವರೇ ಎಚ್ಚರ… ಎಚ್ಚರ..!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಾಟ್ಸಪ್ ವದಂತಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರದಿಂದ ಕಟ್ಟೆಚ್ಚರ

ಪುತ್ತೂರು: ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಏನನ್ನು ಬೇಕಾದರೂ ಬರೆದು ರವಾನಿಸಬಹುದು ಎಂದು ತಿಳಿದುಕೊಂಡಿದ್ದವರಿಗೆ ಈ ಮೂಲಕ ಬಿಜೆಪಿ ಸರಕಾರ ಚಾಟಿ ಬೀಸಿದೆ. ದುರುದ್ದೇಶಪೂರ್ವಕವಾಗಿ ವಾಟ್ಸಪ್‌ನಲ್ಲಿ ಅವಹೇಳನ ಸಂದೇಶ ರವಾನಿಸುವವರಿಗೆ, ಸುಳ್ಳು ಮಾಹಿತಿ ಹರಡುವವರಿಗೆ, ಅಪಪ್ರಚಾರ ನಡೆಸಿ ಇನ್ನೊಬ್ಬರನ್ನು ತೇಜೋವಧೆ ಮಾಡುವುದೇ ನಮ್ಮ ಬಹುದೊಡ್ಡ ಸಾಧನೆ ಎಂದು ಭ್ರಮಿಸಿಕೊಂಡಿದ್ದವರಿಗೆ ಕೇಂದ್ರದ ದಿಟ್ಟ ನಡೆಯಿಂದ ಭಾರೀ ಹಿನ್ನಡೆಯಾಗುವಂತಾಗಿದೆ. ಕಾನೂನಿನ ಅಂಕುಶ ಇಲ್ಲ ಎಂಬ ಕಾರಣಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರ ಮೇಲೆ ಸವಾರಿ ಮಾಡುತ್ತಿರುವ ಸಾಮಾಜಿಕ ಜಾಲತಾಣದವರಿಗೆ ವಾಟ್ಸಪ್ ಕಂಪೆನಿಯ ಮೂಲಕವೇ ಮೂಗುದಾರ ಹಾಕಲು ಕೇಂದ್ರ ಸರಕಾರ ಮುಂದಾಗಿದೆ.

ಸರಕಾರದ ದಿಟ್ಟ ನಡೆ: ಸಾಮಾಜಿಕ ಜಾಲತಾಣವಾದ ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿ, ವದಂತಿ, ದ್ವೇಷಮಯ ಹೇಳಿಕೆ ರವಾನಿಸುವವರನ್ನು ಪತ್ತೆ ಹಚ್ಚಲು ಎಲ್ಲಾ ಸಂದೇಶಗಳ ಡಿಜಿಟಲ್ ಫಿಂಗರ್ ಪ್ರಿಂಟ್‌ಗಳನ್ನು ತೆಗೆದಿಡುವಂತೆ ಕೇಂದ್ರ ಸರಕಾರ ವಾಟ್ಸಪ್ ಕಂಪೆನಿಗೆ ಸೂಚಿಸಿದೆ. ಈ ಮೂಲಕ ಎಲ್ಲಿಯೋ ಅಡಗುತಾಣಗಳಲ್ಲಿ ಕುಳಿತು ಸುಳ್ಳು ಸಂದೇಶ ಸೃಷ್ಠಿಸುವವರಿಗೆ ಮತ್ತು ಗೊತ್ತಿದ್ದೂ ಸುಳ್ಳು ಮಾಹಿತಿಗಳನ್ನು ಫಾರ್ವರ್ಡ್ ಮಾಡಿ ವಿಘ್ನ ಸಂತೋಷ ಅನುಭವಿಸುವವರಿಗೆ ಸರಕಾರ ಕಡಿವಾಣ ಹಾಕಲು ಮುಂದಾಗಿದೆ. ವಾಟ್ಸಪ್ ಸಂದೇಶಗಳ ಫಿಂಗರ್ ಪ್ರಿಂಟ್‌ಗಳನ್ನು ಸಂಗ್ರಹಿಸುವುದರಿಂದ ವಾಟ್ಸಪ್‌ಗಳ ಸಂದೇಶದ ಮೂಲ ಯಾವುದು, ಎಷ್ಟು ಮಂದಿ ಈ ಸಂದೇಶ ಓದಿದ್ದಾರೆ, ಎಷ್ಟು ಜನ ಶೇರ್ ಮಾಡಿದ್ದಾರೆ ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಅವಕಾಶವಾಗಲಿದೆ. ಸಮಾಜದಲ್ಲಿ ವದಂತಿ ಹಬ್ಬುವುದನ್ನು ತಡೆಯುವುದಕ್ಕಾಗಿ ಸರಕಾರ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಸರಕಾರ ವಾಟ್ಸಪ್ ಸಂದೇಶಗಳನ್ನು ಓದಲು ಬಯಸುವುದಿಲ್ಲ, ಆದರೆ ಸಮಸ್ಯೆ ಸೃಷ್ಠಿಸುವ ಸಂದೇಶಗಳನ್ನು ನಿಯಂತ್ರಿಸಲು ಮತ್ತು ಅದರ ಮೂಲವನ್ನು ಪತ್ತೆ ಹಚ್ಚಲು ವಾಟ್ಸಪ್ ಕಂಪೆನಿ ಸಹಕರಿಸಬೇಕು ಎಂದು ಕೇಂದ್ರ ಸರಕಾರ ವಾಟ್ಸಪ್ ಕಂಪೆನಿಗೆ ಸೂಚಿಸಿದೆ. ಸರಕಾರದ ಸೂಚನೆಯನ್ನು ಪಾಲಿಸಲು ವಾಟ್ಸಪ್ ಮುಂದಾಗಿದ್ದು ವಾಟ್ಸಪ್ ಮೆಸೇಜ್‌ಗಳ ಡಿಜಿಟಲ್ ಫಿಂಗರ್ ಪ್ರಿಂಟ್‌ನಿಂದ ಸಂದೇಶಗಳ ಎನ್‌ಕ್ರಿಪ್ಷನ್ ಕೋಡ್ ಅನ್ನು ಭೇದಿಸದೆಯೇ ಮೊದಲು ಯಾರು ಸಂದೇಶ ಪ್ರಸಾರ ಮಾಡಿದರು ಎಂಬುದನ್ನು ಪತ್ತೆ ಹಚ್ಚಲು ಕಾರ್ಯ ಯೋಜನೆ ಸಿದ್ಧಪಡಿಸಿದೆ.

ಹಿನ್ನೆಲೆ: 2018ರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ಅಪಹರಣ ಕುರಿತ ವದಂತಿಗಳು ಹಬ್ಬಿ ನಿರಪರಾಧಿಗಳ ಮೇಲೆ ಹಲ್ಲೆ ನಡೆದಿತ್ತು. ಇದರ ಬೆನ್ನಲ್ಲೇ ವಾಟ್ಸಪ್ ಸಂದೇಶದ ಮೇಲೆ ನಿಗಾ ಇಡಲು ಸರಕಾರ ಗಂಭೀರ ಕ್ರಮಗಳಿಗೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಡಿಜಿಟಲ್ ಫಿಂಗರ್ ಪ್ರಿಂಟ್‌ನಿಂದ ಎನ್‌ಕ್ರಿಪ್ಷನ್ ಅನ್ನು ಭೇದಿಸದೆಯೇ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಮತ್ತು ಸಾಮಾಜಿಕ ಜಾಲತಾಣ ಕಂಪೆನಿಗಳು ಭಾರತದಲ್ಲಿ ಬಳಕೆದಾರರ ಅಹವಾಲುಗಳಿಗೆ ಸಂಬಂಧಿಸಿ ಪ್ರತ್ಯೇಕ ಅಧಿಕಾರಿಗಳನ್ನು ನಿಯುಕ್ತಿಗೊಳಿಸಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ವಾಟ್ಸಪ್ ಕಂಪೆನಿಯು ಕೋಮಲ್ ಲಹಿರಿ ಎಂಬವರನ್ನು ಅಹವಾಲುಗಳಿಗೆ ಸಂಬಂಧಿಸಿದ ಅಧಿಕಾರಿಯಾಗಿ ನೇಮಿಸಿದೆ.

ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ `ಸುದ್ದಿ’ ಆಂದೋಲನ…
ಫೇಸ್‌ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡುತ್ತಿರುವವರ ಕುರಿತು ‘ಸುದ್ದಿ ಬಿಡುಗಡೆ’ ಈಗಾಗಲೇ ನಿರಂತರವಾಗಿ ಆಂದೋಲನ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶ ಸೃಷ್ಠಿಸಿ ಅಮಾಯಕರ ತೇಜೋವಧೆ ಮಾಡುವ ತಂಡಗಳು ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಕಾರ್ಯಾಚರಿಸುತ್ತಿರುವ ಕುರಿತೂ ‘ಸುದ್ದಿ ಬಿಡುಗಡೆ’ ಸತತವಾಗಿ ಜಾಗೃತಿ ಮೂಡಿಸಿತ್ತು. ಸುದ್ದಿಯ ಜನಜಾಗೃತಿ ಆಂದೋಲನಕ್ಕೆ ವ್ಯಾಪಕ ಬೆಂಬಲ ದೊರಕಿತ್ತು. ಆದರೆ, ಸೋಶಿಯಲ್ ಮೀಡಿಯಾವನ್ನು ದುರುಪಯೋಗ ಮಾಡಿಕೊಳ್ಳುವುದು ನಮ್ಮ ಹಕ್ಕು ಎಂಬಂತಿರುವ ಬೆರಳೆಣಿಕೆ ಮಂದಿ ಈಗಲೂ ತಮ್ಮ ಕಾನೂನು ಬಾಹಿರ ಕೃತ್ಯವನ್ನು ಮುಂದುವರಿಸುತ್ತಿದ್ದಾರೆ. ಅಂತವರ ವಿರುದ್ಧ ಸುದ್ದಿ ಬಳಗ ಈಗಾಗಲೇ ಕಾನೂನು ಹೋರಾಟ ನಡೆಸುತ್ತಿದೆ. ಈ ಮಧ್ಯೆ ಇದೀಗ ಕೇಂದ್ರ ಸರಕಾರ ಸಾಮಾಜಿಕ ಜಾಲತಾಣಗಳ ದುರುಪಯೋಗ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಈ ಮೂಲಕ ಸುದ್ದಿ ಬಳಗದ ಹೋರಾಟಕ್ಕೆ ನೈತಿಕ ಜಯ ದೊರೆತಂತಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.