- ಬಡವರೊಂದಿಗೆ ನಾನಿದ್ದೇನೆ ಎಂದು ಅಭಯ ನೀಡಿದ ಹಣಕಾಸು ಸಚಿವೆ
ಪುತ್ತೂರು: ಕರಾವಳಿ ಭಾಗದ ಬಡ ಜನರ ಮೂಲ ಕಸುಬಾದ ಬೀಡಿ ಉದ್ಯಮಕ್ಕೆ ಯಾವುದೇ ರೀತಿಯ ತೆರಿಗೆ ವಿಧಿಸದಂತೆ ಕೋರಿ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೀಡಿ ಯೂನಿಯನ್ ಪದಾಧಿಕಾರಿಗಳ ನಿಯೋಗ ಜೂ. 18ರಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಡಿ.ವಿ ಸದಾನಂದ ಗೌಡರಿಗೆ ಮನವಿ ಸಲ್ಲಿಸಿದ ಮರು ದಿನ ಪುತ್ತೂರಿನ ಬೀಡಿ ಕಾರ್ಮಿಕರ ನಿಯೋಗ ಡಿ.ವಿ.ಸದಾನಂದ ಗೌಡರವರ ನೇತೃತ್ವದಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಿದೆ.
ಯೂನಿಯನ್ ಪ್ರಮುಖರಾದ ನೇರಳಕಟ್ಟೆಯ ಮುರಳೀಧರ ಶೆಟ್ಟಿ ಕಲ್ಲಾಜೆ ಮತ್ತು ಅಬ್ದುಲ್ ಜಲೀಲ್ ಸಂಪ್ಯರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಮನವಿ ಸ್ವೀಕರಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ರವರು ಬಡವರೊಂದಿಗೆ ನಾನಿದ್ದೇನೆ, ಬೀಡಿ ಉದ್ಯಮಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.