HomePage_Banner
HomePage_Banner

ಸಂಸ್ಕೃತ ಪ್ರಥಮ ಪರೀಕ್ಷೆ – ಹಾರಾಡಿ ಶಾಲೆಗೆ ಶೇ. 100 ಫಲಿತಾಂಶ

ಪ್ರತೀಕ್ಷಾ 
ಶ್ರೀದೇವಿ

ಪುತ್ತೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ವತಿಯಿಂದ ಶೈಕ್ಷಣಿಕ ವರ್ಷ 2018-19ನೇ ಸಾಲಿನಲ್ಲಿ ನಡೆಸಲಾದ ಸಂಸ್ಕೃತ ಪ್ರಥಮಾ ಪರೀಕ್ಷೆಯಲ್ಲಿ ಹಾರಾಡಿ ಶಾಲೆಗೆ ಶೇ 100 ಫಲಿತಾಂಶ ಲಭಿಸಿದೆ.

ಸೂತ್ರಬೆಟ್ಟು ನಿವಾಸಿ ಬಾಲಕೃಷ್ಣ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿ.ಆರ್.ಪಿ ಆಗಿರುವ ಸವಿತಾ ಗುಜುರಾನ್ ಅವರ ಪುತ್ರಿ ಪ್ರತೀಕ್ಷಾ ಎಂ. ಬಿ ಶೇ.೯೪ ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದು, ತಾರಿಗುಡ್ಡೆಯ ಶಿವರಾಮ ಶಾಸ್ತ್ರಿ ಮತ್ತು ಸುಮಂಗಲ ದಂಪತಿ ಪುತ್ರಿ ಶ್ರೀದೇವಿ ಶೇ.೮೭ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಪರೀಕ್ಷೆಗೆ ಒಟ್ಟು ೨೩ ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕರ್ನಾಟಕ ಸಂಸ್ಕೃತ ಇಲಾಖೆ ಬೆಂಗಳೂರು ಇದರಿಂದ ನಿರ್ವಹಣೆಗೊಳಪಡುತ್ತಿರುವ ಹಾರಾಡಿ ಶಾಲೆಯ ಭಾರತಿ ಸಂಸ್ಕೃತ ಪಾಠ ಶಾಲೆಯು ಏಕೈಕ ಸಂಸ್ಕೃತ ಪಾಠ ಶಾಲೆಯಾಗಿದ್ದು ಸುಬ್ರಮಣ್ಯ ಹೊಳ್ಳ ಇವರು ಸಂಸ್ಕೃತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.