ಪುತ್ತೂರು: ಕುಂಜೂರುಪಂಜ ಅನುದಾನಿತ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮ ಜೂ.20ರಂದು ನಡೆಯಿತು. ಅಖಿಲ ಭಾರತೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಡಾ| ನರೇಂದ್ರ ನಾಯಕ್ ರವರು ಬ್ಯಾಗ್ ವಿತರಿಸಿದರು. ಡಾ ಸಂದೀಪ್ ನಾಯಕ್ ರವರು ಸಹಕಾರದಲ್ಲಿ ಮಂಗಳೂರಿನ AID without religion trust ವತಿಯಿಂದ ಬ್ಯಾಗ್ ನೀಡಿದ್ದರು. ಶಾಲಾ ಆಡಳಿತ ಮಂಡಲಿ ವತಿಯಿಂದ ಒಂದನೇ ತರಗತಿಯ 16ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಶಾಲಾ ಸಂಚಾಲಕ ಪ್ರಭಾಕರ ಕಲ್ಲೂರಾಯ, ಅಧ್ಯಕ್ಷ ಪ್ರಭಾಕರ ಪ್ರಭು, ಸದಸ್ಯ ಕೆ. ರಾಮ ಭಟ್ , ಆರ್ಯಾಪು ಗ್ರಾ.ಪಂ. ಸದಸ್ಯೆ ಸರಸ್ವತಿ ಉಪಸ್ಥಿತರಿದ್ದರು.
ಮುಖ್ಯ ಗುರು ಉದಯ ಕುಮಾರ್ ಸ್ವಾಗತಿಸಿದರು. ಸಹ ಶಿಕ್ಷಕಿ ರಂಜಿನಿ ಎಂ. ವಂದಿಸಿದರು. ಗೌರವ ಶಿಕ್ಷಕಿಯರಾದ ವಿನುತ ಮತ್ತು ಮೋನಿಕಾ ಸಹಕರಿಸಿದರು.