ನಿಡ್ಪಳ್ಳಿ; ಇಲ್ಲಿಯ ಕೂಟೇಲು ಬಳಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ರೆಂಜದಿಂದ ಮುಡ್ಪಿನಡ್ಕ ಹೋಗುವ ಲೋಕೋಪಯೋಗಿ ರಸ್ತೆಯ ಕೂಟೇಲು ಮುಂತಾದ ಕಡೆ ಜೂ.19 ರಂದು ರಾತ್ರಿ ಸುರಿದ ಬಾರಿ ಮಳೆಗೆ ನೀರು ಚರಂಡಿ ಬಿಟ್ಟು ರಸ್ತೆಯ ಮೇಲೆ ಹರಿದಿದೆ. ಇದರ ಪರಿಣಾಮ ನೀರಿನೊಂದಿಗೆ ಕೊಚ್ಚಿಕೊಂಡು ಬಂದ ಮಣ್ಣು ರಸ್ತೆ ಮೇಲೆ ನಿಂತು ಡಾಮರ್ ರಸ್ತೆ ಕೆಸರುಮಯವಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ತೊಂದರೆಯಾಗಿದೆ. ರಸ್ತೆಯ ಬದಿ ಇತ್ತೀಚೆಗೆ ಅಗಲೀಕರಣ ಗೊಳಿಸುವ ಕಾಮಗಾರಿ ನಡೆಸಿದ ನಂತರ ನೀರು ಹರಿಯಲು ಅಲ್ಲಲ್ಲಿ ಅಡ್ಡವಾಗಿ ಕಣಿ ಮಾಡಲಾಗಿತ್ತು. ಆದರೆ ಅದು ಸಮರ್ಪಕವಾಗಿ ನಿರ್ವಹಿಸದ ಕಾರಣದಿಂದ ನೀರು ರಸ್ತೆ ಮೇಲೆ ಹರಿದಿರಬಹುದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಚರಂಡಿಯ ಮಣ್ಣು ನೀರಿನೊಂದಿಗೆ ಬಂದು ರಸ್ತೆ ಮೇಲೆ ಬಿದ್ದು ಇಡೀ ರಸ್ತೆ ಕೆಸರಿನಿಂದ ತುಂಬಿ ಸಮಸ್ಯೆಯಾಗಿದೆ.