ಅಕ್ರಮ ಮದ್ಯ ಸಾಗಾಟ: ಆರೋಪಿಯ ಬಂಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಅಕ್ರಮವಾಗಿ ಮಾರಾಟ ಮಾಡಲೆಂದು ಮದ್ಯ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಸೊತ್ತು ಸಮೇತ ಬಜತ್ತೂರು ಗ್ರಾಮದ ಟಪ್ಪಾಲು ಕೊಟ್ಟಿಗೆ ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಗೋಳಿತೊಟ್ಟು ಗ್ರಾಮದ ಸಣ್ಣಂಪಾಡಿಯ ಕಿನ್ಯಾಡಿ ನಿವಾಸಿ ಕೃಷ್ಣ ಪೂಜಾರಿ (51) ಬಂಧಿತ ಆರೋಪಿ. ಬುಧವಾರ ಮಧ್ಯಾಹ್ನ ಟಪ್ಪಾಲು ಕೊಟ್ಟಿಗೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿದ್ದು, ಈ ಸಂಧರ್ಭ ಇದರಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯದ ಪ್ಯಾಕೇಟ್‌ಗಳನ್ನು ಹಾಗೂ ಬಾಟ್ಲಿಯನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂತು. ದ್ವಿಚಕ್ರ ವಾಹನ ಸವಾರ ಕೃಷ್ಣ ಎಂಬಾತನನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ದ್ವಿಚಕ್ರ ವಾಹನ ಸಹಿತ ಆತನಲ್ಲಿದ್ದ ೭.೮೩೦ ಲೀಟರ್ ಮೈಸೂರ್ ಲ್ಯಾನ್ಸರ್ ಮದ್ಯದ ಸ್ಯಾಚೆಟ್‌ಗಳು ಹಾಗೂ ಬಾಟಲಿಗಳನ್ನು ಮತ್ತು ೪೬೦ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೊತ್ತ ೨,೭೦೦ ಹಾಗೂ ದ್ವಿಚಕ್ರ ವಾಹನದ ಅಂದಾಜು ಮೊತ್ತ ೨೫,೦೦೦ ರೂ. ಎಂದು ಅಂದಾಜಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.