HomePage_Banner
HomePage_Banner

ಪುರಾತನ ಕಾಲದ ಯೋಗಕ್ಕೆ ಅಂತರಾಷ್ಟ್ರೀಯ ಮಾನ್ಯತೆ

Puttur_Advt_NewsUnder_1
Puttur_Advt_NewsUnder_1


ರೋಗ್ಯವೇ ಭಾಗ್ಯಎಂಬ ಮಾತಿನಂತೆ ಮನುಷ್ಯ ತನ್ನ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ದಿನಚರಿ ಉತ್ತಮ ಆಹಾರ ಪದಾರ್ಥಗಳ ಜೊತೆ ಜೊತೆಗೆ ನಿಯಮಿತವಾದ ವ್ಯಾಯಾಮ,ಯೋಗಾಭ್ಯಾಸಗಳ ಕಡೆಗೆ ಬಹುಮುಖ್ಯವಾದ ಗಮನವನ್ನು ಕೊಡಬೇಕಾದ ಅವಶ್ಯಕತೆ ಪ್ರಸ್ತುತ ಕಾಲಘಟ್ಟದಲ್ಲಿದೆ.ನಾವು ದಿನಂಪ್ರತಿ ಪತ್ರಿಕೆಗಳ ಪುಟ ತಿರುವಿದಾಗ ಅತೀ ಎಳೆಯ ಪ್ರಾಯದಲ್ಲೇ ಮನುಷ್ಯ ಗಂಭೀರ ಖಾಯಿಲೆಗೆ ತುತ್ತಾದ,ಅನಾರೋಗ್ಯದಿಂದ ಬಳಲುತ್ತಿರುವ ಘಟನೆಗಳನ್ನು ಸಹಜವಾಗಿಯೇ ನೋಡುತ್ತಿರುತ್ತೇವೆ.ನಮ್ಮ ಹಿರಿಯರ ಕಾಲಘಟ್ಟದಲ್ಲಿ ಹತ್ತಾರು ಕಿ.ಮಿಗಟ್ಟಲೆ ನಡೆದೇ ಶಾಲೆಗೆ ಸಾಗಿ ಶಿಕ್ಷಣ ಪಡೆದ ನಿದರ್ಶನಗಳಿಂದಲೇ ದೇಹಕ್ಕೆ ವ್ಯಾಯಾಮ ದೊರೆತು ನೂರಾರು ವರ್ಷ ನಮ್ಮ ಪೂರ್ವಜರು ಬದುಕಿ ಬಾಳುತ್ತಿದ್ದರು.

ಯೋಗ ಎಂಬ ಸಂಸ್ಕೃತ ಪದಕ್ಕೆ ಪುರಾತನ ಕಾಲದ ಇತಿಹಾಸವಿದೆ.ಆರೋಗ್ಯಕರ,ಸದೃಢ ದೇಹ ತಮಗಿರಬೇಕೆಂಬುವುದು ಇಂದು ಹೆಚ್ಚಿನ ಜನರ ಮನಸ್ಸಿನಲ್ಲಿರುವ ವಿಷಯವಾಗಿದೆ.ಅನೇಕ ಶತಮಾನಗಳ ಅನುಭವದಿಂದ ದೇಹದ ಪ್ರತಿಯೊಂದು ಅಂಗಕ್ಕೂ,ಮಾಂಸಖಂಡಗಳಿಗೂ ,ನರಗಳಿಗೂ,ಗ್ರಂಥಿಗಳಿಗೂ ವ್ಯಾಯಾಮ ಸಿಗುವಂತೆ ಆಸನಗಳನ್ನು ನಿಯೋಜಿಸಲಾಗಿದ್ದು,ಅವು ಒಳ್ಳೆಯ ದೇಹವನ್ನು ಬೆಳೆಸುತ್ತದೆ.ಕಷ್ಟದ ದಿನನಿತ್ಯದ ಸಾಧನೆಯಿಂದ ಮಾತ್ರ ಗಳಿಸಬಹುದಾದ ಆಸ್ತಿ ಅದು.ದೇಹ ಮನಸ್ಸು ಮತ್ತು ಆತ್ಮಗಳ ಸಾಮರಸ್ಯದ ಅವಸ್ಥೆಯಿಂದ ದೈಹಿಕ,ಮಾನಸಿಕ ಶಾಂತಿ ನೆಮ್ಮದಿಗಳ ಅರಿವುಗಳನ್ನು ಪಡೆಯುವುದೇ ನಿಜವಾದ ಆರೋಗ್ಯ.

ಇಂದಿನ ನಾಗರೀಕತೆಯ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಯೋಗಸಾಧನೆಯ ಅವಶ್ಯಕತೆಯಿದೆ.ನಾವು ಉಪಯೋಗಿಸುವ ಆಹಾರ,ಪಾನೀಯ,ಉಸಿರಾಡುವ ಗಾಳಿ ಎಲ್ಲವೂ ಪ್ರಸಕ್ತ ಮಲೀನಗೊಂಡಿದ್ದು,ಸಹಜವಾಗಿಯೇ ರೋಗರುಜಿನಗಳಿಂದ ಬಳಲುವಂತಾಗಿದೆ.ಇವುಗಳಿಂದ ವಿಮುಕ್ತಗೊಂಡು ಆರೋಗ್ಯವಂತರಾಗಿ ದೀರ್ಘಾಯುಷಿಗಳಾಗಿ ಬದುಕಿ ಬಾಳಲು ಯೋಗವೆಂಬುವುದು ಅತ್ಯವಶ್ಯಕ.ಹಿಂದಿನ ಗುರುಕುಲ ಪದ್ಧತಿಯಲ್ಲಿ ಯೋಗಶಾಸ್ತ್ರವೆಂಬ ಶಿಕ್ಷಣವೇ ಚಾಲ್ತಿಯಲ್ಲಿತ್ತು.ಸಾವಿರಾರು ವರ್ಷಗಳ ಸಂಸ್ಕಾರವಿರುವ ಭಾರತದಲ್ಲಿ ನಮ್ಮ ಪೂರ್ವಜರು ಶತಾಯುಷಿಗಳಾಗಿರುತ್ತಿದ್ದರೆಂದರೆ ಮೂಲ ಕಾರಣ ಅವರು ತಿನ್ನುವ ಆಹಾರ, ವಾಸಿಸುವ ಪರಿಸರ ಮತ್ತು ಜೀವನಶೈಲಿ.ಆದರೆ ಇಂದಿನ ಪೀಳಿಗೆಯ ಜನರಲ್ಲಿ ಮಾತಿಗಿಳಿದರೆ ಸಹಜವಾಗಿಯೇ ಆರೋಗ್ಯದಲ್ಲಿ ಏರಿಳಿತ,ರಕ್ತದೋತ್ತಡ,ಮಧುಮೇಹ,ಹೃದಯಸಂಬಂಧಿ ಕಾಯಿಲೆಯಿಂದ ಬಳಲುವವರೇ ಹೆಚ್ಚು.

ಜೂನ್ 21 ನ್ನು ವಿಶ್ವ ಯೋಗ ದಿನವಾಗಿ ವಿಶ್ವಸಂಸ್ಥೆ ಘೋಷಿಸಿದೆ.ಭಾರತ ಸರಕಾರ ಯೋಗಕ್ಕೆ ವಿಶೇಷ ಒತ್ತು ನೀಡಿದೆ.ಯೋಗ ಶರೀರ ಮತ್ತು ಮನಸ್ಸನ್ನು ವೃದ್ಧಿಗೊಳಿಸುವ ಏಕೈಕ ಸಾಧನ.ಏಕಾಗ್ರತೆ,ಬುದ್ಧಿಯ ವಿಕಾಸಕ್ಕೆ,ಒತ್ತಡ ನಿವಾರಣೆಗೆ ಸ್ವಸ್ಥ ಬದುಕಿಗೆ ಯೋಗ ಅವಶ್ಯಕ.ಜತೆಗೆ ದೈನಂದಿನ ಧ್ಯಾನ,ಪ್ರಾಣಾಯಾಮ ಮನಸ್ಸಿನ ಏಕಾಗ್ರತೆ ಮತ್ತು ಶ್ವಾಸಕೋಶದ ಶುದ್ಧಿಗೆ ಪೂರಕವಾದ ಸಾಧನ.ಆಧುನಿಕ ಯುಗದಲ್ಲಿ ಯುವ ಪೀಳಿಗೆ ನಡೆಸುವ ಜಿಮ್ ಪದ್ಧತಿಗೂ,ಯೋಗಕ್ಕೂ ಅಜಗಜಾಂತರ ವ್ಯೆತ್ಯಾಸವಿದೆ.ಯೋಗಕ್ಕೆ ಜಾತಿ ಧರ್ಮವೆಂಬ ಬೇಲಿಯಿಲ್ಲ.ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದವರು ನಾವೇ ಆಗಿರುವುದರಿಂದ ಯೋಗ ಎಂಬುವುದು ಒಂದು ದಿನದ ಮಾಧ್ಯಮದ ಪ್ರಚಾರಕ್ಕೋ,ಸಾಮಾಜಿಕ ಜಾಲತಾಣಕ್ಕೋ ಸೀಮಿತವಾಗದೆ ನಿತ್ಯನಿರಂತರವಾದಾಗ ದೇಹ ಮತ್ತು ಮನಸ್ಸುಗಳ ಮದ್ಯೆ ಐಕ್ಯತೆ ಮೂಡಿ ಮನುಷ್ಯ ಆರೋಗ್ಯಯುತ ಜೀವನ ನಡೆಸಲು ಸಾಧ್ಯ.ದೇಹವು ಮನಸ್ಸಿನ ದೇವಸ್ಥಾನವಾಗಿದ್ದರೆ,ಯೋಗವು ಸುಂದರವಾದ ದೇವಸ್ಥಾನವನ್ನು ಸೃಷ್ಠಿಸುತ್ತದೆ. 2015 ಜೂನ್ 21 ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ವಿಶ್ವಾದ್ಯಂತ ವರ್ಷಂಪ್ರತಿ ಆಚರಿಸಲಾಗುತ್ತಿದೆ.ಸರ್ವರಿಗೂ ಯೋಗದಿನದ ಶುಭಾಶಯಗಳು.

ಆದರ್ಶ್ ಶೆಟ್ಟಿ ಉಪ್ಪಿನಂಗಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.