HomePage_Banner
HomePage_Banner
HomePage_Banner
HomePage_Banner

ಸವಣೂರು ಪದ್ಮಾಂಬಾ ವಾಣಿಜ್ಯ ಸಂಕೀರ್ಣದಲ್ಲಿ ಸಂಜೀವಿನಿ ಕ್ಲಿನಿಕ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಸವಣೂರಿನ ಸುತ್ತ ಮುತ್ತಲಿನ ಜನತೆಗೆ ಸಂಜೀವಿನಿ ಕ್ಲಿನಿಕ್ ಒಳ್ಳೆಯ ಆರೋಗ್ಯದ ಸೇವೆಯನ್ನು ನೀಡುವ ಮೂಲಕ, ಈ ಸಂಸ್ಥೆಯು ಹತ್ತೂರುಗಳಲ್ಲಿ ಕೀರ್ತಿಯನ್ನು ಪಡೆಯಲಿ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ಹೇಳಿದರು. ಅವರು ಜೂ. 20 ರಂದು ಸವಣೂರು ಪದ್ಮಾಂಬಾ ವಾಣಿಜ್ಯ ಸಂಕೀರ್ಣದಲ್ಲಿ ಸಂಜೀವಿನಿ ಕ್ಲಿನಿಕ್‌ನ್ನು ದೀಪ ಬೆಳಗಿಸಿ, ಉದ್ಘಾಟಿಸಿದರು.

ಸಮಾರಂಭಧ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ, ಅಧ್ಯಕ್ಷೆ ಇಂದಿರಾ ಬಿ.ಕೆ ವಹಿಸಿದ್ದರು. ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಬೆಳಂದೂರು ಜಿ.ಪಂ ಕ್ಷೇತ್ರದ ಸದಸ್ಯೆ ಪ್ರಮೀಳಾ ಜನಾರ್ಧನ್‌, ಅಂಗನವಾಡಿ ಕಾರ್‍ಯಕರ್ತೆ ವಿಜಯ ಈಶ್ವರ, ಸವಣೂರಿನ ಉದ್ಯಮಿ ಎನ್.ಸುಂದರ ರೈ ಸವಣೂರು, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕರೆ, ಡಾ.ಲತಾ ಎಸ್ ಭಟ್‌ರವರುಗಳು ಶುಭಹಾರೈಸಿದರು

ಕೆ.ಎಂ.ಗೋಪಿನಾಥ ರೈ ಮಾಡಾವು, ಕೆ.ಎಂ ಅಶ್ವಿನ್ ಕುಮಾರ್ ರೈಮಾಡಾವು, ಬಾಲಕೃಷ್ಣ ಶೆಟ್ಟಿ ಬೆಳ್ತಂಗಡಿ, ಸಂಧ್ಯಾ ರೈ, ಕಸ್ತೂರಿಕಲಾ ಎಸ್ ರೈ ಸವಣೂರು, ನಾರಾಯಣ ರೈ ಕಲಾಯಿ, ಕಸ್ತೂರಿ ಬಾಲಕೃಷ್ಣ ರೈರವರು ಅತಿಥಿಗಳನ್ನು ಗೌರವಿಸಿದರು. ಸವಣೂರು ಸಂಜೀವಿನಿ ಕ್ಲಿನಿಕ್‌ನ ವೈದ್ಯೆ ಡಾ. ಚೈತ್ರರಶ್ಮಿ ಎ ರೈಯವರು ಸ್ವಾಗತಿಸಿ, ಶ್ರದ್ಧಾ ವಂದಿಸಿದರು. ನವೋದಯ ಪ್ರೇರಕಿ ಪ್ರೇಮ ಪ್ರಾರ್ಥನೆಗೈದರು. ಸವಣೂರು ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮಾ ಪಿ.ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.