ನೆಲ್ಯಾಡಿ: ರಹ್ಮಾನಿಯ ಮಸ್ಜಿದ್ ಕೊಚ್ಚಿಲ ಗೋಳಿತ್ತೊಟ್ಟು ಇದರ ಅಧೀನದಲ್ಲಿ ಕಾರ್ಯಾಚಸುತ್ತಿರುವ ಸಹದಿಯ ಮದರಸದ ಪ್ರಾರಂಭೋತ್ಸವ ಮದರಸದ ಸಭಾಂಗಣದಲ್ಲಿ ನಡೆಯಿತು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಮಲ್ಲಿಕ್ ಸಮರಗುಂಡಿ ವಹಿಸಿದ್ದರು. ನೆಲ್ಯಾಡಿ ಕೋಲ್ಪೆ ಜುಮಾ ಮಸ್ಜಿದ್ನ ಖತೀಬರಾದ ಅಬ್ದುರ್ರಶೀದ್ ರಹ್ಮಾನಿಯವರು ದು:ವಾ ನೇತ್ರತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕೊಚ್ಚಿಲ ರಹ್ಮಾನಿಯ ಮಸ್ಜಿದ್ ಇಮಾಮರಾದ ಝಕರಿಯ ಮುಸ್ಲಿಯಾರ್ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಲ್ಪೆ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಅಬೂಬಕ್ಕರ್, ಅಬ್ಬಾಸ್ ಮುಸ್ಲಿಯಾರ್ ಮುಅಲ್ಲಿಂ ಕೊಚ್ಚಿಲ, ಅಬೂಬಕ್ಕರ್ ಸಿದ್ದೀಕ್ ಮುಅಲ್ಲಿಂ ಕೊಚ್ಚಿಲ, ಗೋಳಿತ್ತೊಟ್ಟು ಕೊಚ್ಚಿಲ ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೇನ್ಸ್ ಅಸೋಸಿಯೇಶನ್ನ ಅಧ್ಯಕ್ಷ ಹಾರಿಸ್, ಉಸ್ಮಾನ್ ಕೋಲ್ಪೆ, ಕೋಲ್ಪೆ ಮಸೀದಿ ಆಡಳಿತ ಸಮಿತಿ ಕಾರ್ಯದರ್ಶಿ ರಂಝಾನ್ ಸಾಹೇಬ್, ಉಪಾಧ್ಯಕ್ಷ ಅಬ್ದುಲ್ ಕುಂಞ, ಕೋಲ್ಪೆ ಖಲಂದರ್ ಷಾ ದಪ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್, ಎಸ್ಕೆಎಸ್ಎಸ್ಎಫ್ ಕೋಲ್ಪೆ ಕ್ಲಸ್ಟರ್ ಅಧ್ಯಕ್ಷ ರಹೀಂ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಮದರಸದ ಮಕ್ಕಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ನಾಸಿರ್ರವರು ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ವಂದಿಸಿದರು.