HomePage_Banner
HomePage_Banner
HomePage_Banner

ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರಕ್ಕೆ ಬೆಳ್ತಂಗಡಿಯಿಂದ ನಿಯೋಗ ಭೇಟಿ – ಕೊಡಿಮರಕ್ಕೆ ಎಳ್ಳೆಣ್ಣೆ ಸಮರ್ಪಣೆ, ಜೀರ್ಣೋದ್ಧಾರಕ್ಕೆ ದೇಣಿಗೆ ಅರ್ಪಣೆ

Puttur_Advt_NewsUnder_1
Puttur_Advt_NewsUnder_1
ಗೆಜ್ಜೆಗಿರಿಗೆ ನಿಯೋಗ ಭೇಟಿ, ಎಳ್ಳೆಣ್ಣೆ ಸಮರ್ಪಣೆ, ದೇಣಿಗೆ ಅರ್ಪಣೆ

ಪುತ್ತೂರು: ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ಗೆ ಭೇಟಿ ನೀಡಿದ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸೇವಾ ಸಂಘದ ನಿಯೋಗ, ಕ್ಷೇತ್ರದಲ್ಲಿ ತೈಲಾಧಿವಾಸಗೊಂಡಿರುವ ಕೊಡಿಮರಕ್ಕೆ ಎಳ್ಳೆಣ್ಣೆ ಸಮರ್ಪಿಸಿ, ಜೀರ್ಣೋದ್ಧಾರಕ್ಕೆ ದೇಣಿಗೆ ಸಮರ್ಪಿಸಲಾಯಿತು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷರೂ, ಬೆಳ್ತಂಗಡಿ ಗುರು ನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷರೂ ಆದ ಪೀತಾಂಬರ ಹೇರಾಜೆ ಅವರ ನೇತೃತ್ವದಲ್ಲಿ ಸುಮಾರು ಐವತ್ತು ಜನರ ತಂಡ ಗೆಜ್ಜೆಗಿರಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ೫೦ ಲೀಟರ್ ಹಾಗೂ ಉಜಿರೆಯ ಯುವವಾಹಿನಿ ಸಂಚಾಲನ ಸಮಿತಿಯ ವತಿಯಿಂದ 10 ಲೀಟರ್ ಎಳ್ಳೆಣ್ಣೆ ಸಮರ್ಪಿಸಲಾಯಿತು. ತೈಲಾಧಿವಾಸಗೊಂಡ ಕೊಡಿಮರಕ್ಕೆ ಸಾಮೂಹಿಕ ಎಳ್ಳೆಣ್ಣೆ ಸಮರ್ಪಣೆ ಅಭಿಯಾನದ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗೆಜ್ಜೆಗಿರಿ ಕ್ಷೇತ್ತದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್, ಕಾರ್ಯದರ್ಶಿ ಸುಧಾಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಮುಂಬೈ ಬಿಲ್ಲವ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎನ್.ಟಿ. ಪೂಜಾರಿ ಮತ್ತು ಮುಂಬೈ ಉದ್ಯಮಿ ಹರೀಶ್ ಅಮೀನ್ ಅವರು ಗೆಜ್ಜೆಗಿರಿ ಕ್ಷೇತ್ರದ ಜೀರ್ಣೋದ್ಧಾರ ನಿಧಿಗೆ ನೀಡಿದ 5 ಲಕ್ಷ ರೂಪಾಯಿಗಳ ಚೆಕ್‌ನ್ನು ಈ ಸಂದರ್ಭ ಹಸ್ತಾಂತರಿಸಲಾಯಿತು. ಇದೇ ವೇಳೆ ತಂಡದ ಸದಸ್ಯರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ತಂಡದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಸೋಮನಾಥ ಬಂಗೇರ ವರ್ಪಾಳೆ, ಪ್ರಮುಖರಾದ ಸುಜಿತಾ ವಿ. ಬಂಗೇರ, ರಾಜಶ್ರೀ ವಿ. ರಮಣ್, ನಿತ್ಯಾನಂದ ನಾವರ, ಶೇಖರ ಬಂಗೇರ, ಜಯರಾಮ ಬಂಗೇರ, ಜಯವಿಕ್ರಮ, ಕೇಶವತಿ, ಶಾಂತಾ ಕುವೆಟ್ಟು, ಉಮೇಶ್ ಕುವೆಟ್ಟು, ನಾರಾಯಣ ಪೂಜಾರಿ ಮಚ್ಚಿನ, ವಿನೋದಿನಿ ರಾಮಪ್ಪ, ರಾಕೇಶ್ ಮೂಡುಕೋಡಿ, ಸಂತೋಷ್ ಉಪ್ಪಾರ, ದಿನೇಶ್, ಗೋಪಾಲ್ ಕೋಲಾಗೆ, ಲಕ್ಷ್ಮಣ ಪೂಜಾರಿ, ಚಂದಪ್ಪ ಪೂಜಾರಿ, ವಿಶ್ವನಾಥ ಕರ್ಕೆರ, ಶುಭಕರ, ರಾಮಣ್ಣ ಪೂಜಾರಿ, ರವಿಕುಮಾರ್ ಬರೆಮೇಲು ಮತ್ತಿತರರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.