ನೆಲ್ಯಾಡಿ: ಫಲ ಹೊತ್ತ ರೆಂಬೆ ಬಾಗುತ್ತದೆ, ಗೊನೆ ಹೊತ್ತ ಬಾಳೆ ಬಾಗುತ್ತದೆ, ತೆನೆ ಹೊತ್ತ ಪೈರು ಬಾಗುತ್ತದೆ, ಮನುಷ್ಯರಾದ ನಾವೂ ಬಾಗಿ ನಡೆಯಲು ಕಲಿಯಬೇಕು ಬದಲು ಬೀಗ ಬಾರದು ಎಂದು ಉಜಿರೆ ಎಸ್ಡಿಎಂ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಹೇಳಿದರು.
ಅವರು ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಸಿಲ್ವರ್ ಜೂಬಿಲಿ ಹಾಲ್ನಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ರೆ.ಫಾ. ಡಾ| ವರ್ಗೀಸ್ ಕೈಪನಡುಕ್ಕರವರು ಮಾತನಾಡಿ, ಪೋಷಕರು ಶಿಕ್ಷಕರೊಂದಿಗೆ ಕೈ ಜೋಡಿಸಬೇಕು. ಆಗ ಮಕ್ಕಳ ಪ್ರಗತಿ ಸಾಧ್ಯ ಎಂದು ಹೇಳಿದರು. ಶಾಲಾ ಪ್ರಾಂಶುಪಾಲ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿಯವರು ಮಾತನಾಡಿ, ಶಿಸ್ತಿನ ಜೀವನ ನಮ್ಮದಾಗಬೇಕು, ಶಿಸ್ತು ನಮ್ಮ ಧ್ಯೇಯವಾಗಿದೆ ಎಂದು ಹೇಳಿ ಶಾಲಾ ನಿಯಮವನ್ನು ವಾಚಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಗಂಗಾಧರ ಶೆಟ್ಟಿ ಶುಭಹಾರೈಸಿದರು. ಕಾರ್ಯದರ್ಶಿ ಜೋರ್ಜ್ ಕೆ ತೋಮಸ್ ವರದಿ ವಾಚಿಸಿದರು. ಶಿಕ್ಷಕಿ ಮಂಜು ಪಿಲಿಪ್ ಸ್ವಾಗತಿಸಿ, ಪೂರ್ಣಿಮಾ ಶೆಣೈ ವಂದಿಸಿದರು. ಭಾವನ ಕಾರ್ಯಕ್ರಮ ನಿರೂಪಿಸಿದರು.