HomePage_Banner
HomePage_Banner
HomePage_Banner
Breaking News

ಸಹನಾ ಕಾಂತಬೈಲು ಅವರಿಗೆ ಹಲಸು ಸಾರ ಮೇಳದಲ್ಲಿ ಹ್ಯಾಟ್ರಿಕ್ ಪ್ರಥಮ

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಹಲಸು ಮೇಳ ಮೌಲ್ಯವರ್ಧಿತ ರೂಪ ಅನಾವರಣವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಎರಡು ದಿನಗಳ ಹಲಸು ಸಾರ ಮೇಳದಲ್ಲಿ ನಡೆದ ಹಲವು ಸ್ಪರ್ಧೆಗಳ ಮಹಿಳೆಯರ ವಿಭಾಗದಲ್ಲಿ ಸಹನಾ ಕಾಂತಬೈಲು ಪ್ರಥಮಸ್ಥಾನ ಹ್ಯಾಟ್ರಿಕ್ ಗಳಿಸಿದ್ದು ವಿಶೇಷ ಖಾದ್ಯ ತಯಾರಿಕೆ, ಹಲಸು ಬೇರ್ಪಡಿಸುವುದು, ಹಲಸಿನಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಕ್ಕಾಗಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಿಬಿರ ಜಯರಾಮ ಕೆದಿಲಾಯ ಬಹುಮಾನ, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಇವರು ಅಂಕಣ, ಬರಹ, ಪಾಕ ವೈವಿದ್ಯತೆ, ಕವನವಾಚನ ಗಳಲ್ಲಿ ಭಾಗವಹಿಸಿದ್ದಾರೆ.
ಕ್ಯಾಂಪ್ಕೋ ಅಧ್ಯಕ್ಷ ಆರ್ ಸತೀಶ್ಚಂದ್ರ, ಹಲಸು ಸ್ನೇಹ ಸಂಗಮದ ಅಧ್ಯಕ್ಷರು ಸೇಡಿಯಾಪು ಜನಾರ್ಧನ ಭಟ್, ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್ ವೇಗಸ್, ಕಾರ್ಯದರ್ಶಿ ಸುಹಾಸ್ ಮರಿಕೆ, ಸಂಚಾಲಕ ಸತೀಶ್, ಜೆಸಿಐ ಅಧ್ಯಕ್ಷ ಗೌತಮ್ ರೈ, ಪ್ರಕಾಶ್ ಕೊಡಂಕೇರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಇವರು ಕಳೆದ ವರ್ಷ ನಡೆದ ಹಲಸು ಮೇಳದಲ್ಲಿ ಬಹುಮಾನ ಗಳಿಸಿ ಸತತ ಎರಡನೇ ವರ್ಷ ಬಹುಮಾನಗಳಿಸಿದ್ದಾರೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.