ವಿಟ್ಲ: ಭಾರತದ ಅತ್ಯುನ್ನತ ಮದ್ರಸಾ ಶಿಕ್ಷಣ ಮಂಡಳಿ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ನಡೆಸಿದ 2018-19ನೇ ಸಾಲಿನ 5ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಟ್ಲದ ಚಂದಳಿಕೆ ಉಸ್ಮಾನಿಯ ಮದ್ರಸ ವಿದ್ಯಾರ್ಥಿನಿ ಆಯಿಷತ್ ಸಮ್ನಾ 519 ಅಂಕಗಳೊಂದಿಗೆ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಚಂದಳಿಕೆ ಮದ್ರಸದ 5ನೇ ತರಗತಿಯಲ್ಲಿ ಕಲಿಯುತ್ತಿರುವ ಏಕೈಕ ವಿದ್ಯಾರ್ಥಿನಿಯಾಗಿದ್ದು, ಅಧ್ಯಾಪಕ ಅಬ್ಬಾಸ್ ಮದನಿ ಅವರು ಒಬ್ಬಳೆ ವಿದ್ಯಾರ್ಥಿನಿಗೆ ತರಬೇತಿ ನೀಡಿದ್ದರು. ಏಕೈಕ ವಿದ್ಯಾರ್ಥಿನಿ ಸಾಧನೆ ಮಾಡಿರುವುದು ವಿಶೇಷವಾಗಿದೆ. ಈಕೆ ಇಸಾಕ್ ಹಾಜಿ ಹಾಗೂ ಶಾಹಿನಾ ದಂಪತಿಗಳ ಪುತ್ರಿಯಾಗಿದ್ದಾರೆ.