ವಿಟ್ಲ: ಮೇಗಿನಪೇಟೆ ಅಲ್ಖೈರ್ ಮಹಿಳಾ ಶರೀಯತ್ ಕಾಲೇಜಿನ ಪ್ರಾರಂಭೋತ್ಸವ ನಡೆಯಿತು. ಕಾಲೇಜು ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಫೈಝಿ ಪರ್ತಿಪ್ಪಾಡಿರವರು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ ಏರ್ಸೌಂಡ್ ಅಧ್ಯಕ್ಷತೆ ವಹಿಸಿದ್ದರು.ಕಾಲೇಜು ಅಧ್ಯಾಪಕರಾದ ಅಬ್ಬಾಸ್ ದಾರಿಮಿ ಕೆಲಿಂಜ, ಇಬ್ರಾಹಿಂ ಫೈಝಿ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಮೊಹಮ್ಮದ್ ಹಾಜಿ ಎಎಸ್ ಮಾರ್ಟ್, ಮೊಹಮ್ಮದ್ ಗಮಿ, ಇಕ್ಬಾಲ್ ಶೀತಲ್, ಕರೀಂ ಕೆಲಿಂಜ, ಶರೀಫ್ ಮೂಸಾ ಕುದ್ದುಪದವು, ಮಹಮ್ಮದ್ ಅಲಿ ವಿಟ್ಲ, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಫ್ವಾನ್ ಮಹಮ್ಮದ್ ಸ್ವಾಗತಿಸಿದರು. ವ್ಯವಸ್ಥಾಪಕ ಹಕೀಂ ಅರ್ಶದಿ ನಿರೂಪಿಸಿದರು.