HomePage_Banner
HomePage_Banner
HomePage_Banner
Breaking News

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಯೋಗ ವಿಶ್ವಕ್ಕೆ ಭಾರತದ ಕೊಡುಗೆ, ಪತಂಜಲಿಯ ಯೋಗ ಶಾಸ್ತ್ರವು ಮಾನವ ಬದುಕಿನ ಪ್ರಮುಖ ಭಾಗವೆಂದು ಪರಿಗಣಿಸಿ ಜೂನ್ 21ನೇ ತಾರೀಕನ್ನು ವಿಶ್ವ ಯೋಗ ದಿನ ಎಂದು ಆಚರಿಸುತ್ತಿದ್ದೇವೆ. ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಇಂದು ಭಾರತ ವಿಶ್ವ ಗುರುವಾಗುವಲ್ಲಿ ದಿಟ್ಟ ಹೆಜ್ಜೆಯನ್ನು ಇರಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯೇ ಸರಿ. ಕೇವಲ ಯೋಗವು ಈ ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತೀ ದಿನವು ಆಚರಿಸುವಂತಗಾಲಿ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ರವರು ತಾಲೂಕು ಮಟ್ಟದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪುತ್ತೂರಿನ ಸಹಾಯಕ ಕಮೀಷನರ್  ಕೃಷ್ಣಮೂರ್ತಿ ಸಿ.ಎಚ್‌ರವರು ಯೋಗ ಮಾಡಿದರೆ ಮಾನವ ದೇಹಕ್ಕೆ ಉತ್ತಮ. ಹಣ, ಸಂಪತ್ತು ಎಷ್ಟೇ ಮಾನವನಲ್ಲಿ ಇರಬಹುದು ಆದರೇ ಮಾನವನು ರೋಗಗ್ರಸ್ತನಾದರೆ ಅವೆಲ್ಲ ವ್ಯರ್ಥ. ಇದನ್ನು ಹೋಗಲಾಡಿಸಬೇಕಾದರೆ ಯೋಗ ಅತ್ಯಗತ್ಯವೆಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ  ಸುಕನ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ  ಸುಂದರ ಗೌಡ, ಯುವಜನ ಕೇಂದ್ರದ ಸಂಯೋಜನಾಧಿಕಾರಿಯಾದ  ಮಾಮಚ್ಚನ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ  ಅಬ್ರಹಂ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾದ ಬಿರ್ಮಣ್ಣ ಗೌಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್,  ವಸಂತಿ ,  ಸುನೀತಾ, ಭರತ್ ಪೈ ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ  ಸತೀಶ್ ಕುಮಾರ್ ರೈ ಸ್ವಾಗತಿಸಿ, ಶಿಕ್ಷಕಿ  ಹಿತಾ ಪ್ರಾರ್ಥಿಸಿ, ದಕ್ಷಿಣ ಕನ್ನಡ ಜಿಲ್ಲಾ ಯೋಗ ಸಂಘದ ಅಧ್ಯಕ್ಷರಾದ  ರಾಮಣ್ಣ ರೈ ಪ್ರಸ್ತಾವನೆಗೈದು, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ  ಸಂಧ್ಯಾ, ಕೆ.ಜಿ ವಿಭಾಗದ ಮುಖ್ಯ ಶಿಕ್ಷಕಿ  ಮಮತಾ , ದೈಹಿಕ ಶಿಕ್ಷಕರಾದ ಭಾಸ್ಕರ ಗೌಡ, ಗಿರೀಶ್, ದೀಪಕ್,  ಹರ್ಷಿತಾ,  ಆಶಾಲತಾ,  ವಾಣಿಶ್ರೀ,  ರಶ್ಮಿ ಸಹಕರಿಸಿದರು.

ಶಿಕ್ಷಕರಾದ ಗಣೇಶ್ ಏತಡ್ಕ ಕಾರ್ಯಕ್ರಮ ನಿರ್ವಹಿಸಿದರು. ನಂತರ ಶಾಲಾ ಯೋಗ ಸಂಯೋಜಕಿನಮಿತಾರವರು ಮಕ್ಕಳಿಗೆ ಸೂರ್ಯನಮಸ್ಕಾರ ಮತ್ತು ಯೋಗದ ವಿವಿದ ಆಯಾಮಗಳನ್ನು ಹೇಳಿಕೊಟ್ಟರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.