HomePage_Banner
HomePage_Banner
HomePage_Banner
HomePage_Banner

ಚೈತನ್ಯ ಮಿತ್ರ ವೃಂದದಿಂದ ಯೋಗ ದಿನಾಚರಣೆ


ಪುತ್ತೂರು: ಪಡೀಲು ಚೈತನ್ಯ ಮಿತ್ರ ವೃಂದದಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಾಂಕೇತಿಕವಾಗಿ ಸಂಸ್ಥೆಯ ವಠಾರದಲ್ಲಿ ಜೂ.21ರಂದು ಯೋಗ ಮಾಡಲಾಯಿತು.

ಸ್ಥಳೀಯ ನಗರಸಭಾ ಸದಸ್ಯ ಪದ್ಮನಾಭ ನಾಯ್ಕ್ ಯೋಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಒತ್ತಡ ರಹಿತ ಜೀವನಕ್ಕೆ ಯೋಗವು ಒಂದು ಸುಲಭ ಸಾಧ್ಯವಾದ ಮಾರ್ಗವಾಗಿದೆ ಎಂದು ಹೇಳಿದರು. ಮಿತ್ರವೃಂದದ ಹಿರಿಯ ಸದಸ್ಯ ಗಣೇಶ್ ಯನ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಪುರಂದರ್ ಪಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಬಿ ಯವರು ಪ್ರಾರ್ಥಿಸಿ, ಸ್ವಾಘತಿಸಿದರು. ರವೀಂದ್ರ ಪೈಯವರು ವಂದಿಸಿದರು. ಸೌಮ್ಯ ಪುರಂದರ್ ರವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಪ್ರಾಣಾಯಾಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.