ಯುವ ಒಕ್ಕಲಿಗ ಗೌಡ ಘಟಕ ಕುಂಬ್ರ ವಲಯದ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಇದರ ಯುವ ಘಟಕ ಕುಂಬ್ರ ವಲಯ ಇದರ ನೂತನ ಪದಾಧಿಕಾರಿಗಳ ಪದಸ್ವೀಕಾರ ಮತ್ತು ನಿರ್ಗಮಿತ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಜೂ.19ರಂದು ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷ ರಾಧಾಕೃಷ್ಣ ನಂದಿಲ ಮಾನತಾಡಿ, ಸಂಘಟನೆಗಳನ್ನು ರಚಿಸಿಕೊಂಡು ಸಮಾಜಸೇವೆ ಮಾಡಲು ಸಾಧ್ಯ, ತಾಲೂಕು ಯುವ ಘಟಕ ಹಲವಾರು ಕಾರ್ಯಕ್ರಮ ನಡೆಸುತ್ತಿದ್ದು ಕುಂಬ್ರ ವಲಯದ ಯುವ ಘಟಕ ಸಂಪೂರ್ಣ ಸಹಕಾರ ನೀಡುತ್ತಿದೆ, ನೂತನ ಪದಾಧಿಕಾರಿಗಳು ಸಮಾಜಕ್ಕೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟ ಕುಂಬ್ರ ವಲಯದ ಅಧ್ಯಕ್ಷ ಲೋಕೇಶ್ ಚಾಕೋಟೆ ಮಾತನಾಡಿ, ಯುವಕರು ತಮ್ಮನ್ನು ತಾವು ಸಂಘಟನೆಗಳೊಂದಿಗೆ ತೊಡಿಸಿಕೊಂಡು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಂಘಟನೆಗಳ ಮೂಲಕ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.

ನೂತನ ಅಧ್ಯಕ್ಷರಾಗಿ ಪದಸ್ವೀಕಾರ ಪದಸ್ವೀಕರಿಸಿದ ಜಯರಾಮ ಗೌಡ ಮುಂಡಾಳರವರು ಮಾನತಾಡಿ, ಅವಕಾಶಗಳು ಯಾವತ್ತೂ ಸಿಗುವುದಿಲ್ಲ, ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಸಂಘಟನೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದರು. ಎಲ್ಲರ ಸಹಕಾರ ಪಡೆದುಕೊಂಡು ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದ್ದೇವೆ ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೇಳಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಿರ್ಗಮಿತ ಅಧ್ಯಕ್ಷ ಸುಬ್ರಾಯ ಗೌಡ ಮಾಡಾವು ಮಾತನಾಡಿ, ಎರಡು ವರ್ಷಗಳಲ್ಲಿ ಇತರ ಸಂಘಗಳೊಂದಿಗೆ ಸೇರಿಕೊಂಡು ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ, ರಕ್ತದಾನ ಶಿಬಿರ, ತಾಲೂಕು ಮಟ್ಟದ ಕ್ರೀಡಾಕೂಟ, ವಲಯಮಟ್ಟದ ಕ್ರೀಡಾಕೂಡ ಇತ್ಯಾದಿಗಳು ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಟ್ರಸ್ಟ್‌ನ ಮೇಲ್ವಿಚಾರಕ ವಿಜಯ ಕುಮಾರ್, ಯುವ ಘಟಕದ ಕಾರ್ಯದರ್ಶಿ ವಿಶ್ವನಾಥ ಬೊಳ್ಳಾಡಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ನಿರ್ಣಯ ಪುಸ್ತಕ ಹಸ್ತಾಂತರಿಸಿ ಪದಸ್ವೀಕಾರ
ಯುವ ಘಟಕ ಕುಂಬ್ರ ವಲಯದ ನೂತನ ಅಧ್ಯಕ್ಷರಾದ ಜಯರಾಮ ಗೌಡರವರಿಗೆ ನಿರ್ಗಮನ ಅಧ್ಯಕ್ಷ ಸುಬ್ರಾಯ ಗೌಡ, ಕಾರ್ಯದರ್ಶಿ ಯೋಗೀಶ್‌ರವರು ನಿರ್ಣಯ ಪುಸ್ತಕ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಕರಾದ ಶಿವರಾಮ ಗೌಡ ಇದ್ಯಪೆ, ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ, ಗೌಡ ಸೇವಾ ಸಂಘದ ವಲಯಾಧ್ಯಕ್ಷ ತಿರುಮಲೇಶ ಗೌಡ ದೊಡ್ಡಮನೆ, ತಾಲೂಕು ಯುವ ಘಟಕದ ಸಾಂಸ್ಕೃತಿ ಕಾರ್ಯದರ್ಶಿ ಪರಮೇಶ್ವರ ಗೌಡ, ಕುಂಬ್ರ ವಲಯ ಯುವ ಘಟಕ ಪದಾಧಿಕಾರಿಗಳಾದ ಯತೀಂದ್ರ ಕೊಚ್ಚಿ, ಸತೀಶ್ ಪಾಂಬಾರು, ರಾಘವ ಗೌಡ ಕೆರೆಮೂಲೆ, ದಯಾನಂದ, ದಿವ್ಯಪ್ರಸಾದ್, ಸಂಜೀವ ಗೌಡ ಚಾಕೋಟೆ, ಜಗನ್ನಾಥ ಪಟ್ಟೆ, ಶಿವಣ್ಣ ಗೌಡ ಪಯಂದೂರು, ಶೇಷಪ್ಪ ಗೌಡ ಪರನೀರು, ದಾಸಪ್ಪ ಗೌಡ ನೀರ್ಪಾಡಿ, ಹರೀಶ್, ಚಂದ್ರಹಾಸ ಕುರಿಯ, ಚರಣ್ ಗೌಡ ದೋಳ, ಅಪಕ್ಷಯ್ ಇದ್ಯಪೆ, ಮೋಕ್ಷಿತ್ ಇದ್ಯಪೆ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಜಯರಾಮ ಗೌಡ ಸ್ವಾಗತಿಸಿದರು. ವಿಶ್ವನಾಥ ಗೌಡ ಬೊಳ್ಳಾಡಿ ವಂದಿಸಿದರು. ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟ ಕುಂಬ್ರ ವಲಯದ ಕಾರ್ಯದರ್ಶಿ ಶ್ರೀಕಾಂತ ಗೌಡ ಕಾರ್ಯಕ್ರಮ ನಿರೂಪಿಸಿದರು.

ಬೃಹತ್ ರಕ್ತದಾನ ಶಿಬಿರ
ಒಕ್ಕಲಿಗ ಗೌಡ ಸೇವಾ ಸಂಘ ಕುಂಬ್ರ ವಲಯ, ಯುವ ಘಟಕ, ಮಹಿಳಾ ಘಟಕ ಹಾಗೂ ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟ ಕುಂಬ್ರ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 21 ರಂದು ಕಾವುನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.