ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಯ್ಯೂರು ಪೇಟೆಯಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆ ` ಶ್ರೀ ದೇವಿ ಸಂಕೀರ್ಣ’ದ ಶುಭಾರಂಭವು ಜೂ.21 ರಂದು ಜರಗಿತು. ಪುತ್ತೂರು ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್ರವರು ರಿಬ್ಬನ್ ತುಂಡರಿಸಿ, ದೀಪ ಬೆಳಗಿಸುವ ಮೂಲಕ ಸಂಕೀರ್ಣವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಳೆಯುತ್ತಿರುವ ಕೆಯ್ಯೂರು ಪೇಟೆಗೆ ಇಂತಹ ಸುಸಜ್ಜಿತ ವಾಣಿಜ್ಯ ಸಂಕೀರ್ಣಗಳ ಅವಶ್ಯಕತೆ ತುಂಬಾ ಇದೆ. ಅದರಲ್ಲೂ ಡಾ.ಶಿವಪ್ರಸಾದ್ ಶೆಟ್ಟಿಯವರು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಮೂಲಕ ಅದರಲ್ಲೆ ಕ್ಲಿನಿಕ್, ಮೆಡಿಕಲ್ ಹಾಗೂ ಲ್ಯಾಬ್ ವ್ಯವಸ್ಥೆ ಮಾಡುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಆಸ್ಪತ್ರೆಯನ್ನು ಕಟ್ಟಿಸುವಂತಹ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಡಾ.ಪಿ.ಬಿ.ರೈ ಪ್ರತಿಷ್ಠಾನದ ಅಧ್ಯಕ್ಷ, ಹಿರಿಯರಾದ ದಂಬೆಕ್ಕಾನ ಸದಾಶಿವ ರೈಯವರು ಮಾತನಾಡಿ, ಕ್ಲಿನಿಕ್ನಿಂದ ಹಿಡಿದು ಲ್ಯಾಬ್ ತನಕದ ವ್ಯವಸ್ಥೆಯನ್ನು ಡಾ.ಶಿವಪ್ರಸಾದ್ ಶೆಟ್ಟಿಯವರು ತನ್ನದೇ ಸ್ವಂತ ಕಟ್ಟಡದಲ್ಲಿ ಆರಂಭಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಎಲ್ಲಾ ವಿಧದಲ್ಲೂ ಶ್ರೀದೇವಿಯೂ ಅವರಿಗೆ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ದುಗ್ಗಪ್ಪ ಆಳ್ವ, ಡಾ.ಶಿವಪ್ರಸಾದ್ ಶೆಟ್ಟಿಯವರ ತಂದೆ ಮಹಾಲಿಂಗ ಶೆಟ್ಟಿ, ತಾಯಿ ಚಿತ್ರಾವತಿ ಎಂ.ಶೆಟ್ಟಿ, ಗುಡ್ಡಪ್ಪ ಶೆಟ್ಟಿ, ಶ್ಯಾಮಲ ಜಿ.ಶೆಟ್ಟಿ, ವರ್ತಕ ಸಂಘದ ಸ್ಥಾಪಕ ಅಧ್ಯಕ್ಷ ಆನಂದ ರೈ ದೇವಿನಗರ ಉಪಸ್ಥಿತರಿದ್ದರು.
ಸಂಕೀರ್ಣದ ಮಾಲಕ ಡಾ.ಶಿವಪ್ರಸಾದ್ ಶೆಟ್ಟಿ, ಶುತಿ ಎಸ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಸುರೇಂದ್ರ ರೈ ಇಳಂತಾಜೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಪಂ ಎ.ಕೆ ಜಯರಾಮ ರೈ, ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ರೈ ಇಳಂತಾಜೆ, ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಉದ್ಯಮಿ ರತ್ನಾಕರ ರೈ ಕೆದಂಬಾಡಿಗುತ್ತು, ಡಾ.ರಾಮಚಂದ್ರ ಭಟ್, ಗ್ರಾಪಂ ಸದಸ್ಯ ಮೋಹನ್ ರೈ ಬೇರಿಕೆ, ಕಿಟ್ಟ ಅಜಿಲ ಕಣಿಯಾರು, ತಾಪಂ ಸದಸ್ಯೆ ಭವಾನಿ ಚಿದಾನಂದ್, ಶರತ್ ಕುಮಾರ್ ಮಾಡಾವು, ವೇಣುಗೋಪಾಲ್ ರೈ ನೂಜಿ,ಪದ್ಮನಾಭ ರೈ ಇಳಂತಾಜೆ, ಸೀತಾರಾಮ ರೈ ಕಲಾಯಿ, ಪದ್ಮಪ್ರಸಾದ್ ಕಲಾಯಿ, ಬಾಲಕೃಷ್ಣ ರೈ ಮಾಡಾವು, ಚಂದ್ರಶೇಖರ ರೈ, ಮೋನಪ್ಪ ಪೂಜಾರಿ ಪಲ್ಲತ್ತಡ್ಕ, ರಮಾನಾಥ ರೈ ಕೋಡಂಬು, ಪ್ರಕಾಶ್ ರೈ ಇಳಂತಾಜೆ,ವಿಶ್ವನಾಥ ಪೂಜಾರಿ ಕೆಂಗುಡೇಲು, ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಜಯಂತ ಪೂಜಾರಿ ಕೆಂಗುಡೇಲು, ಕೃಷ್ಣಪ್ರಸಾದ್ ಪಲ್ಲತ್ತಡ್ಕ ಅಬ್ದುಲ್ ಹಮೀದ್ ಪ್ಯಾಮಿಲಿ, ರಮೇಶ್ ಗೌಡ ಉದ್ದೋಳೆ ಸೇರಿದಂತೆ ನೂರಾರು ಮಂದಿ ಆಗಮಸಿ ಶುಭಕೋರಿದರು.