ಪುತ್ತೂರು: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಚ್ಛ ಮನಸ್ಸು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಇದರ ಸದಸ್ಯರಾದ ಶ್ರೀವತ್ಸ ಇವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇವರೊಂದಿಗೆ ಕುಮಾರಿ ನಿಧಿ ಇವರು ಉಪಸ್ಥಿತರಿದ್ದರು.
ಮೊದಲನೆಯದಾಗಿ ಮಕ್ಕಳು ದಾಖಲಾತಿ ಪತ್ರವನ್ನು ಪೂರ್ತಿಮಾಡಿದರು. ನಂತರ ಶ್ರೀವತ್ಸ ಇವರು ಮಕ್ಕಳಿಗೆ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಚಟುವಟಿಕೆಗಳನ್ನು ತಿಳಿ ಹೇಳಿದರು. ಶಾಲಾ ಶಿಕ್ಷಕಿಯಾದ ಕುಮಾರಿ ಪ್ರಾಪ್ತಿ ಬಿ. ಇವರು ಪ್ರತಿಜ್ಞಾ ಬೋಧನೆಯನ್ನು ಮಾಡಿದರು. ನಂತರ ಶ್ರೀವತ್ಸರವರು ಪರಿಸರ ಮಾಲಿನ್ಯದ ಬಗ್ಗೆ ಮಾತನಾಡಿ ಆದ ದುಷ್ಪರಿಣಾಮವನ್ನು ಮಕ್ಕಳಿಗೆ ತಿಳಿ ಹೇಳಿದರು. ಅವರು 3R ಬಗ್ಗೆ ಹೇಳಿದರು. 3R ಅಂದರೆ (Reduce, Revise, Recycle).
ಅವರು ಮಕ್ಕಳು ತಮ್ಮ ಸ್ವಚ್ಛತಾ ಅಭಿಯಾನದಲ್ಲಿ ಹೇಗೆ ಭಾಗವಹಿಸಿದರು ಎಂದು chart ಮೂಲಕ ತೋರಿಸಿದರು. ಅವರು Bag in Bag ಎಂಬ ವಿಷಯದ ಬಗ್ಗೆ ಮಕ್ಕಳಿಗೆ ಹೇಳಿದರು.Bag in Bag ಎಂದರೆ ನಾವು ತೆಗೆದುಕೊಂಡು ಹೋಗುವ ಬ್ಯಾಗುನಲ್ಲಿ ಚಿಕ್ಕದಾದ ಬಟ್ಟೆಯ ಬ್ಯಾಗ್ನ್ನ ಇಡುವುದು, ನಂತರ ಇದರಲ್ಲಿ ನಾವು ಉಪಯೋಗಿಸಿದ ಕಸವನ್ನು ಹಾಕಬೇಕು. ನಂತರ ಕಸದ ಬುಟ್ಟಿಯಲ್ಲಿ ಬಿಸಾಡಬೇಕು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಶ್, ಶಿಕ್ಷಕರು, ಮಕ್ಕಳು ಮತ್ತು ಅತಿಥಿಗಳಾದ ಶೀವತ್ಸ ಮತ್ತು ನಿಧಿ ಇವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯಾದ ಪ್ರಾಪ್ತಿ ಬಿ. ಇವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕೊನೆಯದಾಗಿ ಶಾಲ ಮುಖ್ಯೋಪಾಧ್ಯಾಯರಾದ ರಾಜೇಶ್ ಇವರು ನೆರೆದವರನ್ನು ಅಭಿನಂದಿಸಿದರು.
ಈ ಕಾರ್ಯಕ್ರಮವು 5 ಹಂತದಲ್ಲಿ ಇದ್ದು, ಇದು ಮೊದಲನೆಯ ಹಂತವಾಗಿತ್ತು. ಉಳಿದ ಹಂತವು ಮುಂದಿನ ತಿಂಗಳಲ್ಲಿ ನಡೆಯಲಿರುವುದು.