Home_Page_Advt
Home_Page_Advt
Home_Page_Advt

ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಗೆ ಸಮಿತಿ ಅಧ್ಯಕ್ಷರ ಗೈರು – ಸಭೆ ಬಹಿಷ್ಕರಿಸಿದ ದಲಿತರು


ಪುತ್ತೂರು: ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಗೆ ತಾಲೂಕು ಸಮಿತಿ ಅಧ್ಯಕ್ಷ ತಹಶೀಲ್ದಾರ್ ಗೈರಾದ ಹಿನ್ನೆಲೆಯಲ್ಲಿ ಅವರ ಬದಲು ಮೇಲಾಧಿಕಾರಿ ಸಹಾಯಕ ಕಮಿಷನರ್ ಬರಬೇಕೆಂದು ಪಟ್ಟು ಹಿಡಿದ ದಲಿತರು ಕೊನೆಗೆ ಸಹಾಯಕ ಕಮೀಷನರ್ ಬಾರದೆ ಇದ್ದರೆ ನಾವು ಸಭೆ ಮಾಡಲು ಬಿಡುವುದಿಲ್ಲ ಎಂದು ಹೇಳಿ ಸಭೆ ಬಹಿಷ್ಕರಿಸಿದ ಘಟನೆ ಜೂ. 21ರಂದು ಇಲ್ಲಿನ ತಾ.ಪಂ ಸಭಾಂಗಣದಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುವ ಪುತ್ತೂರು ತಾಲೂಕು ಮಟ್ಟದ ದಲಿತ ಕುಂದು ಕೊರತೆ ಸಭೆಯಲ್ಲಿ ನಡೆಯಿತು.

ಜೂ.20ರಂದು ಸಂಜೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿಯಿಂದ ಬಂಧನಕ್ಕೊಳಗಾದ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರು ಸಭೆಗೆ ಹಾಜರಾಗದಿರುವುದು ಖಚಿತ ಮಾಹಿತಿ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಅವರು ಸಭೆಯನ್ನು ನಡೆಸಲು ಮುಂದಾಗಿದ್ದರು. ಇದನ್ನು ಆಕ್ಷೇಪಿಸಿದ ಕರ್ನಾಟಕ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಅವರು ಮಾತನಾಡಿ ನಮಗೆ ತಹಶೀಲ್ದಾರ್ ಬೇಕು. ಕಂದಾಯ ಇಲಾಖೆ ಅನೇಕ ಸಮಸ್ಯೆಗಳ ಕುರಿತು ಚರ್ಚಿಸಲಿದೆ ಎಂದರು. ಧ್ವನಿಗೂಡಿಸಿದ ಬಾಲಚಂದ್ರ ಸೊರಕೆ ಅವರು ತಹಶೀಲ್ದಾರ್ ಇಲ್ಲವಾದರೆ ಸಹಾಯಕ ಕಮಿಷನರ್ ಆದರೂ ಬರಲಿ ಎಂದರು.

ದಲಿತ್ ಸೇವಾ ಸಮಿತಿ ಅಧ್ಯಕ್ಷ ರಾಜು ಹೊಸ್ಮಠ ಅವರು ಮಾತನಾಡಿ ಸಹಾಯಕ ಕಮೀಷನರ್ ಇನ್ಯಾರನ್ನೋ ಕಳುಹಿಸುವುದು ಕೂಡಾ ಬೇಡ ಎಂದರು. ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಅವರು ಈ ಕುರಿತು ಸಹಾಯಕ ಕಮೀಷನರ್ ಅವರಿಗೆ ಮಾಹಿತಿ ನೀಡಿದರು. ಬಳಿಕ ತಹಶೀಲ್ದಾರ್ ಪರವಾಗಿ ಉಪತಹಶೀಲ್ದಾರ್ ರಾಮಣ್ಣ ನಾಯ್ಕ್ ಬಿ ಅವರು ಸಭೆಗೆ ಹಾಜರಾದರು. ಇದಕ್ಕೂ ಆಕ್ಷೇಪಿಸಿದ ಗಿರಿಧರ ನಾಯ್ಕ ಅವರು ನಾವು ಏನು ಚಹಾ ಕುಡಿದು ಹೋಗಲು ಬರುವುದಲ್ಲ. ದಲಿತರ ಅನೇಕ ಸಮಸ್ಯೆಗಳಿವೆ ಅದಕ್ಕೆ ಪರಿಹಾರ ಬೇಕು. ತಾಲೂಕು ಮಟ್ಟದ ದಲಿತ ಕುಂದು ಕೊರತೆ ಸಮಿತಿಗೆ ತಹಶೀಲ್ದಾರ್  ಇಲ್ಲವೆಂದ ಮೇಲೆ ಅವರಿಂದ ಮೇಲಾಧಿಕಾರಿಗಳ ಬರಬೇಕೆ ಹೊರತು ಕೆಳಗಿನ ಅಧಿಕಾರಿ ಬರುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೇಷಪ್ಪ ನೆಕ್ಕಿಲು ಧ್ವನಿಗೂಡಿಸಿದರು.

ತಹಶೀಲ್ದಾರ್ ಬಂದ ಬಳಿಕ ಮುಂದಿನ ಸಭೆ
ತಹಶೀಲ್ದಾರ್ ಮುಂದಿನ ಸಭೆಯ ದಿನಾಂಕ ತಿಳಿಸಿದ ಬಳಿಕ ದಲಿತ ಕುಂದು ಕೊರತೆ ಸಭೆ ನಡೆಸಲಾಗುವುದು. ಈ ಕುರಿತು ಇಲಾಖೆಯವರಿಗೂ, ಸಮಿತಿ ಸದಸ್ಯರಿಗೂ ಮಾಹಿತಿ ನೀಡಲಾಗುವುದು – ಜಗದೀಶ್ ಎಸ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.