Home_Page_Advt
Home_Page_Advt
Home_Page_Advt

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಯೋಗ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಸಾಧನ.ಯೋಗದ ನಿರಂತರ ಅಭ್ಯಾಸದಿಂದ ಮನೋನಿಯಂತ್ರಣ,ಇಂದ್ರಿಯ ನಿಗ್ರಹ,ಅಧಿಕ ಕಾರ್ಯೋತ್ಸಾಹ ಮೊದಲಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬಹುದು.ಪಾರಮಾರ್ಥಿಕ ಸತ್ಯದೆಡೆಗೆ , ಆತ್ಮದ ಅರಿವನ್ನು ಪಡೆಯುವುದರೆಡೆಗೆ ಸಾಗಲು , ಮನುಷ್ಯರಿಗೆ ನೆರವಾಗುವಂತದ್ದೆಲ್ಲವೂ ಯೋಗವೇ.

ಇದು ಯಾವುದೇ ಜಾತಿ , ಮತ, ಧರ್ಮಕ್ಕೆ ಸೀಮಿತವಾಗಿರದೆ,ಅವೆಲ್ಲವನ್ನೂ ಮೀರಿದ ,ಎಲ್ಲಾ ಕಾಲಗಳಲ್ಲಿಯೂ ಸಲ್ಲುವ ವಿಜ್ಞಾನವೇ ಯೋಗಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಶಿಕ್ಷಣ ಸಂಯೋಜಕರಾದ ಚಂದ್ರಶೇಖರ್ ಇವರು ಹೇಳಿದರು .

ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯ ಪ್ರಯುಕ್ತ ನಡೆದ ಸಭಾಕಾರ್‍ಯಕ್ರಮದಲ್ಲಿ ಯೋಗದ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತಾ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ ಶ್ಯಾನ ಭಾಗ್ ಮಾತನಾಡುತ್ತಾ ವಾಸ್ತವವಾಗಿ ಯೋಗ ಎಂಬುದು ಶರೀರ,ಮನಸ್ಸು ಮತ್ತು ಆತ್ಮದ ಒಂದು ಕನ್ನಡಿಯಾಗಿ ವರ್ತಿಸುತ್ತದೆ ಹಾಗೂ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಮಧ್ಯವರ್ತಿಯಾಗಿ ಕೆಲಸಮಾಡುತ್ತದೆ. ಜೀವನದಲ್ಲಿ ಶಾಂತಿ,ನೆಮ್ಮದಿ ,ಸೌಹಾರ್ದ ,ಸಂತೋಷ ,ಯಶಸ್ಸು ಎಲ್ಲವೂ ಕೈಗೂಡಬೇಕೆಂದರೆ ಯೋಗಾಭ್ಯಾಸವು ಅನಿವಾರ್ಯವಾಗಿರುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ಎಸ್. ಭಾಸ್ಕರ್ ರಾವ್ ಉಪಸ್ಥಿತರಿದ್ದರು.

ಕಾರ್‍ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ ಶ್ಯಾನ ಭಾಗ್ ಸ್ವಾಗತಿಸಿ, ವಂದಿಸಿದರು. ಸಭಾಕಾರ್‍ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನದ ಪ್ರಕಾರಗಳು ಯೋಗಶಿಕ್ಷಕರಾದ ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.