ಪುತ್ತೂರು: ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿರುವ ಪುತ್ತೂರು ಮಹಿಳಾ ಪೊಲೀಸ್ ಠಾಣಾ ಎಸ್.ಐ.ಯಾಗಿ ಸೇಸಮ್ಮ ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ. ಪಡೀಲು ನಿವಾಸಿಯಾಗಿರುವ ಇವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಈ ಅವಧಿಯಲ್ಲಿ ಪುತ್ತೂರು ಮಹಿಳಾ ಠಾಣಾ ಎಸ್.ಐ.ಯಾಗಿ ನಂದಿನಿಯವರು ಕಾರ್ಯ ನಿರ್ವಹಿಸಿದ್ದರು. ನಂದಿನಿಯವರು ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನ ಬಸವನಹಳ್ಳಿಗೆ ಮರು ವರ್ಗಾವಣೆಗೊಂಡಿದ್ದು ಸೇಸಮ್ಮರವರು ಉಡುಪಿಯಿಂದ ಪುತ್ತೂರಿಗೆ ಆಗಮಿಸಿ ಜೂನ್ 21ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.