- ಬನ್ನೂರು ಪ್ರಜ್ನಾ ಬುದ್ದಿಮಾಂದ್ಯ ಆಶ್ರಮದಲ್ಲಿ ಹಣ್ಣು ಹಂಪಲು ವಿತರಣೆ
ಪುತ್ತೂರು: ಎಸ್.ಡಿ.ಪಿ.ಐ. ಸಂಸ್ಥಾಪನಾ ದಿನದ ಅಂಗವಾಗಿ ಬನ್ನೂರು ವಲಯ ಸಮೀತಿ ವತಿಯಿಂದ ಬನ್ನೂರು ಜಂಕ್ಷನ್ ಬಳಿ ಜೂ.21ರಂದು ಬೆಳಿಗ್ಗೆ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಪುತ್ತೂರು ನಗರ ಸಭಾ ಸದಸ್ಯೆ ಕೆ.ಫಾತಿಮತ್ ಝೂರಾ ದ್ವಜಾರೂಹಣಾ ನೆರೆವೇರಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎ ಸಿದ್ದಿಕ್ ಅದ್ಯಕ್ಷತೆ ವಹಿಸಿದರು. ಎಸ್.ಡಿ.ಪಿ.ಐ ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ಪಿಎಫ್ಐ ಸಿಟಿ ಡಿವಿಜನ್ ಅಧ್ಯಕ್ಷ ಯಹ್ಯಾ ಕೆ.ಎಚ್ ಸಂದೇಶ ನೀಡಿದರು. ಬಳಿಕ ಬನ್ನೂರು ಕರ್ಮಲದಲ್ಲಿರುವ ಬುದ್ದಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಬುದ್ದಿಮಾಂದ್ಯರನ್ನು ವಿಶೇಷವಾಗಿ ಪೋಷಿಸುತ್ತಿರುವ ನೋಡಿಕೊಳ್ಳುವ ಅನ್ನಪ್ಪ ದಂಪತಿಯನ್ನು ಗೌರವಿಸಲಾಯಿತು.
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ಬಾವ, ಸಿಲ್ ಸಿಲಾ ವೆಲ್ಫೇರ್ ಅಸೋಸಿಯೇಷನ್ ಬನ್ನೂರು ಅಧ್ಯಕ್ಷ ಇಬ್ರಾಹಿಂ ಕೆ.ಎಮ್, ಯಂಗ್ ಮೆನ್ಸ್ ಅಧ್ಯಕ್ಷ ನಿಝಾಂ ಹಾರಾಡಿ, ಎಸ್ಡಿಪಿಐ ಪಡೀಲ್ ವಲಯ ಅಧ್ಯಕ್ಷರಾದ ಮೋಹಮ್ಮದ್ ಮೋನು, ಎಮ್.ವೈ.ಎಫ್ ಅಧ್ಯಕ್ಷ ಅಝರ್ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು. ಅಝೀಝ್ ಪಡೀಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಿಹಿತಿಂಡಿ ವಿತರಿಸಲಾಯಿತು.