ಸವಣೂರು: ಐದನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿಯಲ್ಲಿ ಯೋಗ ದಿನಾಚರಣೆ ಮತ್ತು ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಗೌಡ ಕೆಡೆಂಜಿಮಾರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹಿರಿಯ ಕ್ರೀಡಾಪಟು ವಸಂತಿ ಶಿವರಾಮ ಗೌಡ ಮೆದು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಯೋಗ ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ಎಸ್ ಯೋಗದ ಮಹತ್ವವನ್ನು ವಿವರಿಸಿದರು. ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುದ್ಮನಮಜಲು ಮತ್ತು ರಾಜೀವಿ ವಿ ಶೆಟ್ಟಿ ಶುಭಹಾರೈಸಿದರು.
ವೇದಿಕೆಯಲ್ಲಿ ಎಸ್ಡಿಎಂಸಿ ಮಾಜಿ ಅಧ್ಯಕ್ಷರುಗಳಾದ ಗೋಪಾಲಕೃಷ್ಣ ಗೌಡ ಆರೆಲ್ತಡಿ, ವೇದಾವತಿ ಕೆಡೆಂಜಿ, ಆಶಾ ಕಾರ್ಯಕರ್ತೆ ಸುಮತಿ, ಪ್ರಗತಿಪರ ಕೃಷಿಕ ತೀರ್ಥರಾಮ ಕೆಡೆಂಜಿ ಉಪಸ್ಥಿತರಿದ್ದರು. ಎಸ್ಡಿಎಂಸಿ ಸದಸ್ಯರು, ಪೋಷಕರು ಹಾಗೂ ಊರವರು ಪಾಲ್ಗೊಂಡಿದ್ದರು. ಗೌರವ ಶಿಕ್ಷಕಿಯರಾದ ಸರಿತಾ ಸ್ವಾಗತಿಸಿ, ದಯಾಮಣಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಅಡುಗೆಯವರಾದ ಹೇಮಾವತಿ ಸಹಕರಿಸಿದರು. ವಸಂತಿ ಶಿವರಾಮ ಗೌಡರ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ವಿತರಿಸಲಾಯಿತು.