HomePage_Banner
HomePage_Banner
HomePage_Banner

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆ 5 ನೇ ವರ್ಷಕ್ಕೆ ಪಾದಾರ್ಪಣೆ

Puttur_Advt_NewsUnder_1
Puttur_Advt_NewsUnder_1
  • ಗಣಹೋಮ, ಲಕ್ಷ್ಮೀಪೂಜೆ, ಸನ್ಮಾನ ಕಾರ್ಯಕ್ರಮ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ೨೦೦೨ರಲ್ಲಿ ಆರಂಭಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಕುಂಬ್ರ ಶಾಖೆಯು ೫ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಜೂ.21  ರಂದು ಶಾಖೆಯ ಕಛೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಪುರೋಹಿತ ಕೃಷ್ಣ ಉಪಾಧ್ಯಾಯಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಕುಂಬ್ರ ಶಾಖೆಯು 2018-19 ನೇ ಸಾಲಿನಲ್ಲಿ 14 ಕೋಟಿಗಿಂತಲೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸಲಹಾ ಸಮಿತಿ ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಂಪೂರ್ಣ ಸಹಕಾರದಿಂದ ಅತ್ಯುತ್ತಮವಾಗಿ ವ್ಯವಹಾರ ನಡೆಸಿದ ಶಾಖೆಯು ಮಾದರಿ ಶಾಖೆಯಾಗಿ ಹೊರಹೊಮ್ಮಿದೆ ಎಂದರು. ಈ ವರ್ಷಾಂತ್ಯದೊಳಗೆ ಶಾಖೆಗೆ 1.02 ಕೋಟಿ ಠೇವಣಿ ಸಂಗ್ರಹಣೆ ಗುರಿ ನಿಗದಿಪಡಿಸಿದ್ದು, ಎಲ್ಲರ ಸಹಕಾರದಿಂದ ಗುರಿ ಮುಟ್ಟಲು ಪ್ರಯತ್ನಿಸುವಂತೆ ಮನವಿ ಮಾಡಿಕೊಂಡರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕುಂಬ್ರ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಇದ್ಯಪೆ ಮಾತನಾಡಿ, ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸವೇ ಯಶಸ್ವಿಗೆ ಕಾರಣವಾಗಿದೆ.ಗ್ರಾಹಕರ ಉತ್ತಮ ಸಹಕಾರದಿಂದ ವ್ಯವಹಾರ ನಡೆಸುತ್ತಿದ್ದ ಉತ್ತಮ ಪ್ರಗತಿಯೊಂದಿಗೆ ಐದನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಸಂಸ್ಥೆಗೆ ಸಹಕರಿಸಿದ ಆಡಳಿತ ಮಂಡಳಿ, ಸಲಹಾ ಸಮಿತಿ ಸದಸ್ಯರಿಗೂ, ಸಿಬ್ಬಂದಿ ವರ್ಗಕ್ಕೂ ಅಭಿನಂದನೆ ಸಲ್ಲಿಸಿ ಮುಂದೆಯೂ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ಹಾಗೂ ಬೆಂಬಲವನ್ನು ನಿರೀಕ್ಷಿಸುತ್ತೇನೆ ಎಂದು ಹೇಳಿ ಸಹಕಾರ ಕೋರಿದರು.ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಅಧ್ಯಕ್ಷ ಶಿವರಾಮ ಗೌಡ ಎಚ್.ಡಿ ಇವರು ಮಾತನಾಡಿ, ಸಂಸ್ಥೆಯು ಅತ್ಯುತ್ತಮವಾಗಿ ವ್ಯವಹಾರ ನಡೆಸುತ್ತಿದ್ದು ಮುಂದೆಯೂ ಯಶಸ್ವಿಯಾಗಿ ಮುನ್ನೆಡೆಯಲಿ ಎಂದು ಶುಭ ಹಾರೈಸಿದರು.

ಸನ್ಮಾನ ಕಾರ್ಯಕ್ರಮ
ಕುಂಬ್ರ ಶಾಖೆಯನ್ನು ಮಾದರಿ ಶಾಖೆಯಾಗಿ ಹೊರಹೊಮ್ಮಲು ಕಾರಣಕರ್ತರಾದ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಇದ್ಯಪೆರವರನ್ನು ಆಡಳಿತ ಪರವಾಗಿ ಗೌಡ ಸಂಘದ ಅಧ್ಯಕ್ಷ ಶಿವರಾಮ ಎಚ್.ಡಿ ಮತ್ತು ನಿಕಟಪೂರ್ವ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಶಾಲು ಹೊದಿಸಿ ಹೂಗುಚ್ಚ ನೀಡಿ ಸನ್ಮಾನಿಸಿದರು.ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಅಧ್ಯಕ್ಷ ಎಚ್.ಡಿ.ಶಿವರಾಮ್, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘಧ ಸ್ಥಾಪಕ ಪ್ರವರ್ತಕ ಜೆ.ಕೆ ವಸಂತ ಗೌಡ ಉರ್ವ, ಮಾಸಿಕ ಸಲಹಾ ಸಮಿತಿ ಸಭೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ ಸದಸ್ಯ ನಾಗಪ್ಪ ಗೌಡ ಬೊಮ್ಮೆಟ್ಟಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಂಘದ ಹಿರಿಯ ಗ್ರಾಹಕ ಹಾಜಿ ಇಬ್ರಾಹಿಂ ಬೊಳ್ಳಾಡಿರವರನ್ನು ನಿವಾಸಕ್ಕೆ ತೆರಳಿ ಶಾಲು,ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ ರಾಮಕೃಷ್ಣ, ನಿರ್ದೇಶಕರುಗಳಾದ ರೇಖಾ ಆರ್.ಗೌಡ, ರಾಮಕೃಷ್ಣ ಗೌಡ ಕರ್ಮಲ, ವೆಂಕಟ್ರಮಣ ಗೌಡ ಕರೆಂಕಿ, ಒಕ್ಕಲಿಗ ಗೌಡ ಸೇವಾ ಸಂಘದ ಪ್ರ.ಕಾರ್ಯದರ್ಶಿ ಶ್ರೀಧರ ಗೌಡ ಕಣಜಾಲು, ಉಪಾಧ್ಯಕ್ಷ ಎ.ವಿ ನಾರಾಯಣ, ಕುಂಬ್ರ ಶಾಖಾ ಸಲಹಾ ಸಮಿತಿ ಸದಸ್ಯ ಲೋಕೇಶ್ ಚಾಕೋಟೆ, ಉಮೇಶ್ ಗೌಡ ಕನ್ನಯ, ಚಂದ್ರಶೇಖರ ಗೌಡ ಸಾರೆಪುಣಿ, ಶ್ರೀಧರ ಗೌಡ ಅಂಗಡಿಹಿತ್ಲು, ವಿಶ್ವನಾಥ ಗೌಡ ಬೊಳ್ಳಾಡಿ, ಶ್ರೀಧರ ಗೌಡ ಎರಕ್ಕಲ, ರಾಮಣ್ಣ ಗೌಡ ಬಸವಹಿತ್ಲು, ವಿಜಯ ಭಾರತಿ ಮಡ್ಯಂಗಳ, ರಾಮಕೃಷ್ಣ ಗೌಡ ಸಾಮೆತ್ತಡ್ಕ, ತಿರುಮಲೇಶ ಗೌಡ ದೊಡ್ಡಮನೆ, ವಕೀಲ ದುರ್ಗಾಪ್ರಸಾದ್ ರೈ ಕುಂಬ್ರ, ರಾಮಣ್ಣ ಗೌಡ ಕೆಯ್ಯೂರು, ಕಟ್ಟಡ ಮಾಲಕ ಪರಮೇಶ್ವರ ಗೌಡ, ದಯಾನಂದ ಅಕಾಯಿ, ಕುಶಾಲಪ್ಪ ಗೌಡ ದೇವಳಿಕೆ, ಜಗನ್ನಾಥ ಶೆಟ್ಟಿ ಕುಂಬ್ರ, ವಿಜಯಕುಮಾರ್ ಕನ್ನಡ್ಕ, ಶ್ರೀಕಾಂತ ಗೌಡ, ಶ್ರೀನಿವಾಸ ಗೌಡ ಕನ್ನಯ, ರವೀಂದ್ರ ಕನ್ನಯ, ಶುಭಪ್ರಕಾಶ್ ಎರೆಬೈಲು, ಹರೀಶ್ ಗೌಡ ಪಾದಲಾಡಿ, ನಾರಾಯಣ ಗೌಡ ಉರ್ವ, ಕೇಂದ್ರ ಕಛೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ, ವಿವಿಧ ಶಾಖಾ ಮೇನೇಜರ್‌ಗಳಾದ ಧರ್ಮರಾಜ್ ಕಡಬ, ಶಿವಪ್ರಸಾದ್ ನೆಲ್ಯಾಡಿ, ರೇವತಿ ಉಪ್ಪಿನಂಗಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಶುಭ ಹಾರೈಸಿದರು. ಕುಂಬ್ರ ಶಾಖೆಯ ಮೆನೇಜರ್ ದಿನೇಶ್ ಪೆಲತ್ತಿಂಜ, ಸಿಬ್ಬಂದಿಗಳಾದ ಕಾವ್ಯ ಎ.ಎಸ್, ಶಿವಕುಮಾರ್ ಪಿ, ದಿನೇಶ್ ಕುಮಾರ್ ಕೆ, ಅನುರಾಜ್ ಪದಡ್ಕ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.