Home_Page_Advt
Home_Page_Advt
Home_Page_Advt

ಇಚ್ಲಂಪಾಡಿ: ಬಿಜೇರು ಕುಟುಂಬದ ದೈವಗಳ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ

Puttur_Advt_NewsUnder_1
Puttur_Advt_NewsUnder_1


ಕಡಬ: ನೂತನವಾಗಿ ನಿರ್ಮಾಣಗೊಂಡ ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ ಬಿಜೇರು ಕುಟುಂಬ ದೈವಸ್ಥಾನದಲ್ಲಿ ಕುಟುಂಬ ದೈವಗಳಾದ ಧರ್ಮದೈವ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ದೈವ, ಗುಳಿಗದ ದೈವ ಹಾಗೂ ಕೊರಗಜ್ಜ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಜೂ.20 ಮತ್ತು 21ರಂದು ನಡೆಯಿತು.

ಜೂ.20ರಂದು ಸಂಜೆ ಉಗ್ರಾಣ ತುಂಬಿಸುವುದು, ಅರ್ಚಕರಿಗೆ ಸ್ವಾಗತ, ಬಳಿಕ ಸಾಮೂಹಿಕ ದೇವತಾ ಪ್ರಾರ್ಥನೆ,ಪುಣ್ಯಾಹ ವಾಚನ, ಹೊಸ ಆಯುಧಗಳನ್ನು ಸ್ವೀಕರಿಸುವುದು,ಅಸ್ತ್ರ ಕಲಶಪೂಜೆ, ರಕ್ಷೆಘ್ನ ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ದೈವಗಳ ಆದಿವಾಸ ಪೂಜೆ ನಡೆದು ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ, ಇಚ್ಲಂಪಾಡಿ ಕೆಡಂಬೇಲು ಮಂಜುಶ್ರೀ ಭಜನಾ ಮಂಡಳಿ ಹಾಗೂ ನೆಟ್ಟಣ ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಜೂ.೨೧ರಂದು ಬೆಳಿಗ್ಗೆ ಗಣಪತಿಹೋಮ, ಕಲಶಪೂಜೆ ನಡೆದು ೧೦.೨೧ರ ಸಿಂಹ ಲಗ್ನ ಶುಭಮುಹೂರ್ತದಲ್ಲಿ ಕುಟುಂಬ ದೈವಗಳಾದ ಧರ್ಮದೈವ ಅಣ್ಣಪ್ಪ ಪಂಜುರ್ಲಿ,ಕಲ್ಲುರ್ಡಿ ದೈವ, ಗುಳಿಗ ದೈವ ಮತ್ತು ಕೊರಗಜ್ಜ ದೈವದ ಪ್ರತಿಷ್ಠೆ ನಡೆಯಿತು. ನಂತರ ಕುಂಭೇಶ ಕಲಶಾಭಿಷೇಕ, ಉಪದೈವಗಳ ಕಲಶಾಭಿಷೇಕ,ಆರತಕ್ಷತೆ, ಪ್ರತಿಷ್ಠಾ ಬಲಿ, ಮುಡಿಪು ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಶುಭಾಕರ ಹೆಗ್ಗಡೆ ಇಚ್ಲಂಪಾಡಿ ಇವರ ಮಾರ್ಗದರ್ಶನದಲ್ಲಿ ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಭಟ್‌ರವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಪಿಎಲ್‌ಡಿ ಬ್ಯಾಂಕ್‌ನ ಕೋಶಾಧಿಕಾರಿ ಭಾಸ್ಕರ ಗೌಡ ಇಚ್ಲಂಪಾಡಿ, ರೆಖ್ಯ ಗುಡ್ರಾ ಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ನೆಲ್ಯಾಡಿ ಸಿಎ ಬ್ಯಾಂಕ್‌ನ ಉಪಾಧ್ಯಕ್ಷ ಕುಶಾಲಪ್ಪ ಗೌಡ, ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್.,ಪ್ರಮುಖರಾದ ದಾಮೋದರ ಮಣಿಯಾಣಿ ಸುಳ್ಯಪದವು, ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಅಶೋಕ್ ಚಿಪ್ಪಾರ್, ರಾಧಾಕೃಷ್ಣ ಕೆರ್ನಡ್ಕ, ಕೇಶವ ಗೌಡ ಅಲೆಕ್ಕಿ, ಬಾಲಕೃಷ್ಣ ಗೌಡ ನೆಲ್ಯಾಡಿ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶೇಖರ ಪರವ ವಿಟ್ಲ, ಯಜಮಾನ ಬೈದ್ಯಶ್ರೀ ದೊಲ್ಲು ಪರವ ಇಚ್ಲಂಪಾಡಿ, ಕುಟುಂಬದ ಹಿರಿಯರಾದ ಸೀತಾ ಗೂನಡ್ಕ, ನೀಲಮ್ಮ ಪಂಜ, ಕಾಂತು ಪರವ ಮಾದೇರಿ, ದೊಲ್ಲು ಪರವ ಇಚ್ಲಂಪಾಡಿ, ಡೀಕಯ್ಯ, ಚೆನ್ನಪ್ಪ ಹಾಗೂ ಬಿಜೇರು ಕುಟುಂಬಸ್ಥರು ಅತಿಥಿಗಳನ್ನು ಬರಮಾಡಿಕೊಂಡು ಸತ್ಕರಿಸಿದರು.

ಸನ್ಮಾನ:
ದೈವಸ್ಥಾನದ ವಾಸ್ತುಶಿಲ್ಪಿ ಗಣಪತಿ ಭಟ್ ಗೋಳಿತ್ತೊಟ್ಟು, ಆಚಾರ್ಯ ಮಂಜುನಾಥ ಆಚಾರ್ಯ ಅರಸಿನಮಕ್ಕಿ ಹಾಗೂ ಚಾವಡಿ ನಿರ್ಮಾಣಗೊಳಿಸಿದ ಡೀಕಯ್ಯ ಗೌಡ ಪಾಲೆತ್ತಡಿಯವರನ್ನು ದೈವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.