Home_Page_Advt
Home_Page_Advt
Home_Page_Advt

ನೂಜಿಬಾಳ್ತಿಲ: ವಿದ್ಯುತ್ ಲೈನ್‌ಗೆ ತಾಗಿಕೊಂಡಿದ್ದ ಮರಗಳ ತೆರವು

Puttur_Advt_NewsUnder_1
Puttur_Advt_NewsUnder_1


ಕಡಬ:ನೂಜಿಬಾಳ್ತಿಲ ಗ್ರಾಮದ ಅಡೆಂಜಕ್ಕೆ ಹಾದು ಹೋಗುವ 11 ಕೆವಿ ಹೆಚ್‌ಟಿ ಲೈನ್‌ಗೆ ತಾಗಿಕೊಂಡಿದ್ದ ಮರ ಹಾಗೂ ಅದರ ಗೆಲ್ಲುಗಳನ್ನು ಮೆಸ್ಕಾಂ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಿದರು.

ಕಲ್ಲುಗುಡ್ಡೆಯಿಂದ ಅಡೆಂಜಕ್ಕೆ ಸಂಪರ್ಕ ಕಲ್ಪಿಸುವ 11 ಕೆವಿ ಹೆಚ್‌ಟಿ ಲೈನ್‌ನ ಬಾಳೆಮಾರು, ಬೊಳ್ಳಾಜೆ, ಅಡೆಂಜಕ್ಕೆ ಅರಣ್ಯ ಪ್ರದೇಶದಲ್ಲಿ ಹಾದುಹೋಗಿತ್ತು. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ವಿದ್ಯುತ್ ಲೈನ್‌ಗೆ ಮರದ ಗೆಲ್ಲುಗಳು ತಾಗಿ ಆಗಾಗ ವಿದ್ಯುತ್ ವ್ಯತ್ಯಯವಾಗಿ ಸಮಸ್ಯೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ವಿದ್ಯುತ್ ಲೈನ್‌ಗೆ ತಾಗಿಕೊಂಡಿರುವ ಮರಗಳ ಕೊಂಬೆಗಳನ್ನು ಸ್ಥಳೀಯರ ಸಹಕಾರದೊಂದಿಗೆ ಮೆಸ್ಕಾಂ ಸಿಬ್ಬಂದಿಗಳು ತೆರವುಗೊಳಿಸಿದರು. ಪವರ್ ಮ್ಯಾನ್ ಗುರುಮೂರ್ತಿಯವರ ನೇತೃತ್ವದಲ್ಲಿ ಕಿರಿಯ ಪವರ್ ಮ್ಯಾನ್ ರಮೇಶ, ಸ್ಥಳೀಯರಾದ ಹರೀಶ, ನವೀನ್, ಜಗದೀಶ, ರಘುರಾಜ, ಬಾಲಚಂದ್ರ, ಅನಿಲ್, ಚೇತನ್, ಜನಾರ್ಧನ, ಮನುರಾಜ, ಪ್ರಮೋದ್, ಸಂದೇಶ್, ಜಯಪ್ರಕಾಶ್, ಗಣೇಶ್, ಶರತ್, ನಿತಿನ್, ಲಕ್ಷ್ಮೀಶ್, ನಿಖಿಲ್, ಪೂವಪ್ಪ ಗೌಡ, ಭರತ್ ಸೇರಿದಂತೆ ಆ ಭಾಗದ ಗ್ರಾಮಸ್ಥರು ಸುಮಾರು ೫ ಕಿ.ಮೀ. ವ್ಯಾಪ್ತಿಯ ತನಕ ವಿದ್ಯುತ್ ಲೈನ್‌ಗೆ ತಾಗುತ್ತಿದ್ದ ಮರಗಳ ಗೆಲ್ಲುಗಳನ್ನು ತೆರವುಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.