ಯೋಗ ಮಾನಸಿಕ ನೆಮ್ಮದಿಯನ್ನು ವೃದ್ಧಿಸುತ್ತದೆ: ವಿನಾಯಕ ಕೃಷ್ಣ
ರಾಮಕುಂಜ: ಯೋಗವು ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದುಕೊಂಡಿದೆ. ಮನುಷ್ಯನು ಸ್ವಾಸ್ಥ್ಯನಾಗಿರಬೇಕಾದರೆ ಯೋಗವು ಬಹುಮುಖ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಮ್.ಎಸ್.ಸಿ ಯೋಗ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕ ವಿನಾಯಕ ಕೃಷ್ಣ ಅವರು ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಆಯುರ್ವೇದ ಆಸ್ಪತ್ರೆ ಪುತ್ತೂರು, ವಿವೇಕಾನಂದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪುತ್ತೂರು ಹಾಗೂ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ಇದರ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಜೀವನದಲ್ಲಿ ಬರೀ ಸಂಪತ್ತು ಗಳಿಸಿಕೊಂಡರೆ ಅದು ವ್ಯರ್ಥ, ಮನಸ್ಸಿಗೆ ನೆಮ್ಮದಿ ಇದ್ದರೆ ಮಾತ್ರ ಮನುಷ್ಯ ಸ್ವಾಸ್ಥ್ಯನಾಗಿರುತ್ತಾನೆ. ಏಕಾಗ್ರತೆ ಹೆಚ್ಚಾಗಬೇಕಾದರೆ ಜ್ಞಾನ ವೃದ್ದಿಸಬೇಕಾದರೆ ಹಾಗೂ ಗುರಿಯನ್ನು ತಲುಪಬೇಕಾದರೆ ಮಾನಸಿಕ ನೆಮ್ಮದಿ ಬೇಕು ಅದು ಯೋಗಾಭ್ಯಾಸದಿಂದ ಮಾತ್ರ ಸಾಧ್ಯ ಎಂದು ಅವರು ಯೋಗದ ಮಹತ್ವವನ್ನು ವಿವರಿಸಿದರು. ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಕಾಲೇಜಿನ ಪ್ರಾಂಶುಪಾಲ ಡಾ. ಸಂಕೀರ್ತ ಹೆಬ್ಬಾರ್, ಆತೂರು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಮುರಳಿ ಕೃಷ್ಣ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಲಕ್ಷ್ಮೀನಾರಾಯಣ ರಾವ್ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ತಿರುಮಲೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ದಿವಾಕರ. ಕೆ. ಸ್ವಾಗತಿಸಿ, ಪ್ರಾಂಶುಪಾಲ ಡಾ. ಸಂಕೀರ್ತ ಹೆಬ್ಬಾರ್ ವಂದಿಸಿದರು, ಹಾಗೂ ವಿದ್ಯಾರ್ಥಿನಿ ಜ್ಯೋತಿರಾವ್ ಕಾರ್ಯಕ್ರಮ ನಿರೂಪಿಸಿದರು.