

ಕಡಬ: ಮರ್ಧಾಳ ಗುಡ್ ಶೆಫರ್ಡ್ ಶಾಲಾ ಮಂತ್ರಿಮಂಡಲ ಜೂ.18 ರಂದು ಶಾಲೆಯಲ್ಲಿ ನಡೆಯಿತು. ಪ್ರಜಾಭುತ್ವ ಮಾದರಿಯಲ್ಲಿ ನಡೆದ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ೧೦ನೇ ತರಗತಿಯ ವೈಭವ್ ಹಾಗೂ ಉಪನಾಯಕಿಯಾಗಿ ೯ನೇ ತರಗತಿಯ ಅಥುಲ್ಯಾ ಆಯ್ಕೆಯಾಗಿದ್ದಾರೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದೇವರಾಜ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಪ್ರಿಯಾ ಸಿ.ಟಿ ಚುನಾಯಿತ ಶಾಲಾ ಮಂತ್ರಿಗಳಿಗೆ “ಪ್ರತಿಜ್ಞಾ ವಿಧಿ”ಯನ್ನು ಭೋಧಿಸಿದರು. ಶಾಲಾ ಶಿಕ್ಷಕ-ಶಿಕ್ಷಕಿಯರು ಚುನಾವಣೆಗೆ ಸಹಕರಿಸಿದರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ಹಕ್ಕನ್ನು ಚಲಾಯಿಸಿದರು.