Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಯೋಗ ನಮ್ಮ ಜೀವನದ ಚಾಲಕ ಆಗಬೇಕು-ಸತೀಶ್ ಬಿಳಿನೆಲೆ

ಉಪ್ಪಿನಂಗಡಿ: ಯೋಗ ಏಕಾಗ್ರತೆಯನ್ನು ಕಾಯ್ದುಕೊಳ್ಳುತ್ತದೆ, ತಾಳ್ಮೆ, ಮನಶ್ಶಾಂತಿ ದೊರಕುತ್ತದೆ ಈ ಎಲ್ಲಾ ಒಳಿತಿನಿಂದಾಗಿ ಅದು ನಮ್ಮನ್ನು ನಿಯಂತ್ರಿಸುತ್ತದೆ, ಆ ಮೂಲಕ ಯೋಗ ನಮ್ಮ ಜೀವನದ ಚಾಲಕ ಆಗಬೇಕು ಅದಕ್ಕಾಗಿ ನಾವುಗಳು ದಿನಕ್ಕೆ ಕನಿಷ್ಠ ೧೦ ನಿಮಿಷವಾದರೂ ಯೋಗಾಭ್ಯಾಸ ಮಾಡಬೇಕು ಎಂದು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಬಿಳಿನೆಲೆ ಹೇಳಿದರು.

ಅವರು ಜೂನ್ ೨೧ರಂದು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಖ್ಯಾತ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್‌ನಿಂದ ಆರಂಭಗೊಂಡು ಅದೆಷ್ಟೋ ಸಾಧಕರ ಹಿಂದೆ ಯೋಗದ ಪರಿಶ್ರಮ ಇದೆ ಎಂದ ಅವರು ಯೋಗದಿಂದ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದರು.

ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯು.ಎಸ್.ಎ. ನಾಯಕ್ ಮಾತನಾಡಿ ಮನುಷ್ಯನ ಆರೋಗ್ಯ ವೃದ್ಧಿಗಾಗಿ ಯೋಗ ಅತ್ಯಂತ ಉತ್ತಮ ಕ್ರಿಯೆಯಾಗಿದ್ದು, ತನ್ನ ಬದುಕನ್ನು ಶಿಸ್ತು ಬದ್ಧವಾಗಿ ಕೊಂಡೊಯ್ಯಲು ಯೋಗ ಸಹಕಾರಿ ಆಗುತ್ತದೆ ಎಂದರು.

ಇಂದ್ರಪ್ರಸ್ಥ ಕಾಲೇಜಿನ ಪ್ರಾಚಾರ್ಯ ರವೀಂದ್ರ ಮಾತನಾಡಿ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕಳೆದ ೧೭ ವರ್ಷಗಳಿಂದ ಯೋಗ ತರಬೇತಿ ತರಗತಿ ನಡೆಯುತ್ತಿದ್ದು, ಯೋಗ ಶಿಕ್ಷಣ ವಿದ್ಯಾರ್ಥಿಗಳ ಕಲಿಕೆಗೂ ಒಳ್ಳೆಯ ಪರಿಣಾಮ ಬೀರುತ್ತದೆ ಎಂದರು.

ಸನ್ಮಾನ:
ವಿದ್ಯಾ ಸಂಸ್ಥೆಯಲ್ಲಿ ಕಳೆದ ೧೭ ವರ್ಷಗಳಿಂದ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿಜೇಶ್‌ರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಗೌರವಿಸಿ,
ಸನ್ಮಾನಿಸಲಾಯಿತು.

ಸಂಸ್ಥೆಯ ಶಿಕ್ಷಕಿ ಮಾಲತಿ ಸ್ವಾಗತಿಸಿ, ವಿದ್ಯಾ ವಂದಿಸಿದರು. ರಮ್ಯ, ಪುಣ್ಯಶ್ರೀ, ವಿಜೇತ ಕುಮಾರ್ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.