ಮಾನಸಿಕ, ಬೌದ್ಧಿಕ ಆರೋಗ್ಯ ಸುಧಾರಣೆಗೆ ಯೋಗ ಬಹುಮುಖ್ಯ ಚಿಕಿತ್ಸೆ-ಡಾ. ರಾಜಾರಾಂ
ಉಪ್ಪಿನಂಗಡಿ: ಬಹಳಷ್ಟು ಮಂದಿ ಆರೋಗ್ಯ ಕೆಟ್ಟು, ಕಾಯಿಲೆ ಬಿದ್ದಾಗ ನಾನಾ ರೀತಿಯ ಔಷಧಿಗೆ ಮೊರೆ ಹೋಗುತ್ತಾರೆ, ಅದು ಎಲ್ಲೂ ಗುಣ ಆಗುವುದುದಿಲ್ಲ ಎಂದು ತಿಳಿದಾಗ ಕೊನೆಗೆ ಯೋಗದ ಮೊರೆ ಹೋಗುತ್ತಾರೆ, ಈ ರೀತಿಯಾಗಿ ಯೋಗ ಮನುಷ್ಯನ ಮಾನಸಿಕ, ಬೌದ್ಧಿಕ ಆರೋಗ್ಯ ಸುಧಾರಣೆಗೆ ಬಹುಮುಖ್ಯ ಚಿಕಿತ್ಸೆ ಎಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ| ರಾಜಾರಾಂ ಹೇಳಿದರು.
ಅವರು ಅವರು ಜೂನ್ ೨೧ರಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಯೋಗದ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಯೋಗಕ್ಕೆ ಸೂಪರ್ ಕಂಪ್ಯೂಟರ್ ಮತ್ತು ಯಾವುದೇ ನಿಷ್ಟ್ರಿಷ್ಠ ಯಂತ್ರಕ್ಕಿಂತ ಮಿಗಿಲಾದ ಶಕ್ತಿ ಇದ್ದು, ಮನುಷ್ಯನ ಜೀವನ ಪದ್ಧತಿಯನ್ನು ನಿಯಂತ್ರಿಸುವ ಶಕ್ತಿ ಹೊಂದಿದ್ದು, ವಿದ್ಯಾರ್ಥಿಗಳು ಇದೀಗ ಇಲ್ಲಿ ೧ ದಿನ ತರಬೇತಿ ಪಡೆದರೆ ಸಾಲದು, ಮುಂದೆ ದಿನನಿತ್ಯ ಮಾಡುವ ಮೂಲಕ ಕ್ರಿಯಾಶೀಲರಾಗಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತಕೃಷ್ಣ, ಕಾಲೇಜಿನ ಉಪ ಪ್ರಾಚಾರ್ಯ ಸಂದರ್ಭೋಚಿತವಾಗಿ ಮಾತನಾಡಿದರು. ಉಜಿರೆ ಎಸ್.ಡಿ.ಎಂ. ಯೋಗ ಮತ್ತು ಆಯುರ್ವೇದ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ಡಾ| ಪ್ರತೀಕ್ಷ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಕಾಲೇಜಿನ ಕಾರ್ಯಾಧ್ಯಕ್ಷ ಎನ್. ಉಮೇಶ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಆದಂ ಕೊಪ್ಪಳ, ಉಮೇಶ್, ಸುರೇಶ್ ಹೆಗ್ಡೆ, ಜಯರಾಂ ಆಚಾರ್ಯ ಉಪಸ್ಥಿತರಿದ್ದರು.
ಶಿಕ್ಷಕರಾದ ಶ್ರೀಧರ್ ಭಟ್ ಸ್ವಾಗತಿಸಿ, ಗುಡ್ಡಪ್ಪ ಬಲ್ಯ ವಂದಿಸಿದರು. ಹೆಚ್.ಸಿ. ಕರುಣಾಕರ, ಸುಬ್ರಹ್ಮಣ್ಯ ಭಟ್, ಲಕ್ಷ್ಮೀಶ ವಿವಿಧ ಕಾರ್ಯಕ್ರಮ ನಿರೂಪಿಸಿದರು.