ಪುತ್ತೂರು: ಔಷಧಿಯಿಂದ ಗುಣಪಡಿಸಲಾಗದ ರೋಗವನ್ನು ಯೋಗದಿಂದ ಗುಣಪಡಿಸಬಹುದು. ಗೋಚರಿಸಲಾಗದೆ ಇರುವ ಶಕ್ತಿ ಯೋಗಕ್ಕಿದೆ ಎಂದು ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಉಪನ್ಯಾಸಕಿ ಯೋಗ ಗುರು ವಾರಿಜಾ ಅವರು ಹೇಳಿದರು.
ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕಳೆದ ಜೂ. 21ರಂದು ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಯೋಗಕ್ಕೆ ಶರಣಾದಾಗ ಖಂಡಿತಾ ಉತ್ತಮ ಪರಿಹಾರ ಸಿಗುತ್ತದೆ. ಯೋಗವನ್ನು ಅಚಲ ನಿರ್ಧಾರದಿಂದ ಮಾಡಬೇಕೆಂದರು.
ಸನ್ಮಾನ:
ಕಳೆದ ೩ ತಿಂಗಳಿನಿಂದ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವ ವಾರಿಜಾ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶೋಭಾ ಶಿವಾನಂದ್ ಸನ್ಮಾನಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಭಿನಂದನಾ ಭಾಷಣ ಮಾಡಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕಣಜಾಲು, ಯುವ ಗೌಡ ಸಂಘದ ಅಧ್ಯಕ್ಷ ರಾಧಾಕೃಷ್ಣ ಗೌಡ ನಂದಿಲ, ಉಪಾಧ್ಯಕ್ಷ ರವಿ ಮುಂಗ್ಲಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸ್ವಾಗತಿಸಿ, ಮಹಿಳಾ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಡಿ ಗೌಡ ವಂದಿಸಿದರು. ಗೌರವಾಧ್ಯಕ್ಷೆ ಗೌರಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಯೋಗ ಗುರು ವಾರಿಜಾ ಅವರಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಯೋಗಾಭ್ಯಾಸ ಮಾಡಿದರು.