ಈಶ್ವರಮಂಗಲ: ಜೂ.21ರಂದು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಯೋಗ ದಿನವನ್ನು ಆಚರಿಸಲಾಯಿತು. ಯೋಗದ ಬಗ್ಗೆ ಸಹಶಿಕ್ಷಕರಾದ ಹರೀಶ್ ಕುಮಾರ್ ವೈ ಮಾತನಾಡಿ ಯೋಗ ವಿವಿಧ ರೋಗಗಳಿಗೆ ರಾಮಬಾಣ. ಇದರಿಂದ ಮನುಷ್ಯನು ದೈಹಿಕ ಮತ್ತು ಮಾನಸಿಕವಾಗಿ ಸಬಲನಾಗುತ್ತಾನೆ. ತನ್ನ ಆಹಾರದಲ್ಲಿ ಸೇವನೆಯಲ್ಲಿ ಬದಲಾವಣೆ ಮಾಡಿಕೊಂಡಾಗ ಅವನ ಜೀವನ ಶೈಲಿ ಉತ್ತಮವಾಗಬಲ್ಲದು. ಇದನ್ನೆ ಯಾವುದೇ ಧರ್ಮದವರು ಜಾತಿಬೇಧವಿಲ್ಲದೆ ಮಾಡುವುದರ ಮೂಲಕ ಯೋಗದ ಮಹತ್ವವನ್ನು ತಿಳಿಯಬಹುದು ಎಂದರು.
ಸಹಶಿಕ್ಷಕಿ ಜಯಶ್ರೀ ಬಿ., ಯೋಗದ ಪೂರ್ವತಯಾರಿ ಮತ್ತು ವಿವಿಧ ಆಸನಗಳ ಬಗ್ಗೆ ಪ್ರಸ್ತಾಪಿಸಿದರು. ಮುಖ್ಯಶಿಕ್ಷಕ ಸಂಜೀವ ಮಿತ್ತಳಿಕೆ ಸೂರ್ಯ ನಮಸ್ಕಾರದ ವಿವಿಧ ಹಂತಗಳ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರಾದ ರೇವತಿ ಕೆ., ವೆಂಕಟರಮಣ ಎನ್., ಸಾವಿತ್ರಿ ಉಪಸ್ಥಿತರಿದ್ದು ಮಕ್ಕಳೊಂದಿಗೆ ತಾವೂ ಸ್ವ ಅನುಭವವನ್ನು ಪಡೆದುಕೊಂಡರು.