ಉಪ್ಪಿನಂಗಡಿ: ಇತ್ತೀಚೆಗೆ ನಡೆದ ಅರೇಬಿಕ್ ಮದ್ರಸ ಶಾಲೆಯ 7 ಮತ್ತು 5ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಪ್ರಕಾರ ಆತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಮದ್ರಸ ಶೇ. 100 ಫಲಿತಾಂಶ ಸಾಧಿಸಿದ್ದು, ಇಬ್ಬರು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಮದ್ರಸ ವಿಭಾಗದ ಮುಖ್ಯ ಶಿಕ್ಷಕ ಹಂಝ ಸಖಾಫಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮದ್ರಸದ 7ನೇ ತರಗತಿಯ ವಿದ್ಯಾರ್ಥಿ ಫಾತಿಮ ಶೈಮ ವಿಶಿಷ್ಟ ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. 7ನೇ ತರಗತಿಯ ಫಾತಿಮ ಸನ ವಿಶಿಷ್ಠ ಶ್ರೇಣಿಯೊಂದಿಗೆ ಪ್ರಥಮ ಸ್ಥಾನಿಯಾಗಿ, ದ್ವಿತೀಯ ಸ್ಥಾನವನ್ನು ಇಲ್ಮಾ ಮಾಷಾ ಪಡೆದಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.