

ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ನ ಶಾಲಾ ಸಂಸತ್ಗೆ ಚುನಾವಣೆ ಇತ್ತೀಚೆಗೆ ನಡೆಯಿತು. ಸಂಸದೀಯ ಮಾದರಿಯಲ್ಲಿ ಚುನಾವಣೆ ನಡೆಯಿತು. ಶಾಲಾ ನಾಯಕನಾಗಿ ಅಕ್ಷಯ್ ಎನ್.ಕೆ 10ನೇ ಹಾಗೂ ಉಪನಾಯಕನಾಗಿ ಅಶ್ವತ್ಥ್ ಜಾನ್ 9ನೇ ತರಗತಿ ಆಯ್ಕೆಗೊಂಡಿದ್ದಾರೆ.
ಲಿಖಿತ್ 10ನೇ ವಿದ್ಯಾಮಂತ್ರಿ, ಡೆಲ್ಸ್ನ್ ವಿ. 8ನೇ ಉಪವಿದ್ಯಾಮಂತ್ರಿ, ಅಹಮ್ಮದ್ ಕೈಸ್ 8ನೇ ಗ್ರಂಥಾಲಯ ಮಂತ್ರಿ, ಆಶ್ನ ಮರಿಯ 8ನೇ ಉಪಗ್ರಂಥಾಲಯ ಮಂತ್ರಿ, ಫಾತಿಮಾ ಆಶಿಫಾ 8ನೇ ಸಾಂಸ್ಕೃತಿಕ ಮಂತ್ರಿ, ಬೋವಸ್ ಸಜಿ 8ನೇ ಉಪಸಾಂಸ್ಕೃತಿಕ ಮಂತ್ರಿ, ಅಲೀನ್ ಸ್ಕರಿಯ 10ನೇ ಕ್ರೀಡಾ ಮಂತ್ರಿ, ಉಮ್ಮರ್ ಸಾಹೀರ್ 8ನೇ ಉಪಕ್ರೀಡಾ ಮಂತ್ರಿ, ಆಶಿಶ್ ಫೌಲ್ 10ನೇ ಆರೋಗ್ಯ ಮಂತ್ರಿ, ಜಿಬಿನ್ 8ನೇ ಉಪ ಆರೋಗ್ಯಮಂತ್ರಿಯಾಗಿ ಆಯ್ಕೆಯಾದರು, ಯೋಗೀಶ್ ಬಿ. 10ನೇ ತರಗತಿ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಗೊಂಡರು. ಮತದಾನಗೈದ ವಿದ್ಯಾರ್ಥಿಗಳಿಗೆ ಶಾಯಿಯ ಗುರುತು ಹಾಕುವ ಮೂಲಕ ಮತದಾನದ ಮಹತ್ವವನ್ನು ತಿಳಿಸಲಾಯಿತು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜಿಮ್ಸನ್ ವರ್ಗೀಸ್ರವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಶಾಲಾ ಶಿಕ್ಷಕ ವೃಂದದವರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಶಾಲಾ ಸಂಚಾಲಕರಾದ ರೆ.ಫಾ.ಹನಿಜೇಕಬ್, ಮುಖ್ಯಗುರು ಸಿಬಿಚ್ಚನ್ ಟಿ.ಸಿ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.