HomePage_Banner
HomePage_Banner
HomePage_Banner

ಸವಣೂರಿನಲ್ಲಿ ಎಸ್ಡಿಪಿಐ ಪಕ್ಷದ ಹತ್ತನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಸವಣೂರು: ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಹತ್ತನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸವಣೂರಿನ ಎಸ್ಡಿಪಿಐ ಕಛೇರಿಯ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮ ಜೂನ್ 21ರಂದು ಬೆಳಿಗ್ಗೆ ನಡೆಯಿತು.

ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಫೀಕ್ ಎಂ ಎ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಸವಣೂರು ವಲಯಾಧ್ಯಕ್ಷ ಅಬ್ದುಲ್ ರಝಾಕ್ ಅಂಕತ್ತಡ್ಕ ವಹಿಸಿದ್ದರು. ಸವಣೂರು ಗ್ರಾಮ ಪಂಚಾಯತ್ ಸದಸ್ಯ‌ ಅಬ್ದುಲ್ ರಝಾಕ್ ಕೆನರಾ ಸಂದರ್ಭೋಚಿತ ಮಾತುಗಳನ್ನಾಡಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸವಣೂರು ಡಿವಿಷನ್ ಅಧ್ಯಕ್ಷ ಸಿದ್ದೀಕ್ ಅಲೆಕ್ಕಾಡಿ, ಕಾರ್ಯದರ್ಶಿ ರಫೀಕ್ ಪಳ್ಳತ್ತಮೂಲೆ, ಪಿಎಫ್ಐ ಸವಣೂರು ವಲಯ ಉಪಾಧ್ಯಕ್ಷ ಸುಲೈಮಾನ್ ಪಳ್ಳತ್ತಮೂಲೆ, ಯುವ ಉದ್ಯಮಿ ಬಿ.ಎಂ ಮುಹಮ್ಮದ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಇರ್ಶಾದ್ ಸರ್ವೆ ಸ್ವಾಗತಿಸಿ, ಬಾತಿಷಾ ಬಡಕೋಡಿ ವಂದಿಸಿದರು.ರಫೀಕ್ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.