

ರಾಮಕುಂಜ: ರಾಮಕುಂಜ ಗ್ರಾಮದ ಕುಂಡಾಜೆ ಸ.ಕಿ.ಪ್ರಾ. ಶಾಲಾ 2019-20ನೇ ಸಾಲಿನ ಮಂತ್ರಿಮಂಡಲವನ್ನು ಮುಖ್ಯಗುರು ಪಿ.ಎಸ್.ನಾರಾಯಣ್ ಭಟ್ರವರ ಮಾರ್ಗದರ್ಶನದಲ್ಲಿ ರಚಿಸಲಾಯಿತು. ಮುಖ್ಯಮಂತ್ರಿಯಾಗಿ ಕೀರ್ತನ್ (5ನೇ), ಉಪಮುಖ್ಯಮಂತ್ರಿಯಾಗಿ ಗಗನ್ಕುಮಾರ್ (5ನೇ)ರವರು ಚುನಾವಣೆಯ ಮೂಲಕ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಕಾವ್ಯಶ್ರೀ(5ನೇ) ಆರೋಗ್ಯಮಂತ್ರಿಯಾಗಿ ರಕ್ಷಿತಾ (5ನೇ) ಸಾಂಸ್ಕೃತಿಕ ಮಂತ್ರಿಯಾಗಿ ಶ್ವೇತಾ(5ನೇ), ತೋಟಗಾರಿಕೆ ಮಂತ್ರಿಯಾಗಿ ಮೋಹನ (5ನೇ), ರಕ್ಷಣಾ ಮಂತ್ರಿಯಾಗಿ ಹೇಮಂತ್ (5ನೇ), ಕ್ರೀಡಾಮಂತ್ರಿಯಾಗಿ ಯೋಗಿತಾ (5ನೇ), ಸ್ವಚ್ಛತಾ ಮಂತ್ರಿಯಾಗಿ ನಾಗೇಂದ್ರ ಪ್ರಸಾದ್(5ನೇ), ಆಹಾರ ಮಂತ್ರಿಯಾಗಿ ಶ್ರೇಯಸ್(4ನೇ), ಗ್ರಂಥಾಲಯ ಮಂತ್ರಿಯಾಗಿ ದೀಕ್ಷಾ (4ನೇ), ವಿರೋಧ ಪಕ್ಷದ ನಾಯಕನಾಗಿ ನಿಶಾಂತ್ (೫ನೇ)ರವರನ್ನು ಆಯ್ಕೆ ಮಾಡಲಾಯಿತು. ಗೌರವ ಶಿಕ್ಷಕಿಯರಾದ ಗೀತಾ ಎನ್, ಚಿತ್ರಾವತಿ ಉಪಸ್ಥಿತರಿದ್ದರು.
(ಫೋಟೋ ಇದೆ-ಕೀರ್ತನ್, ಗಗನ್ಕುಮಾರ್)
===============================================================================