ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಎಲ್ಲ ಸರಕಾರಿ ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಶಾಲಾ ಕಾಲೇಜು ಮತ್ತು ಖಾಸಗಿ ಕಾಲೇಜುಗಳ ಮುಖ್ಯಸ್ಥರ ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರುಗಳನ್ನು ಬರಮಾಡಿಕೊಂಡು ಕುಂಬ್ರ ಸಮುದಾಯ ಭವನದಲ್ಲಿ ಸುಪ್ರೀಂ ಕೋರ್ಟಿನ ಗೈಡ್ಲೈನ್ಸ್ ಪ್ರಕಾರ ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಸಾಗಿಸುವ ವಾಹನಗಳ ಬಗ್ಗೆ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಪುತ್ತೂರು ಗ್ರಾಮಾಂತರ ಠಾಣಾ ವತಿಯಿಂದ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶಕ್ತಿವೇಲು ಪೊಲೀಸ್ ಉಪ ನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆ ರವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಅಧ್ಯಕ್ಷರು ಹಾಜರಿದ್ದು ಕಾರ್ಯಕ್ರಮವನ್ನು ಸಿಬ್ಬಂದಿ ಕರುಣಾಕರ ಅವರು ನಡೆಸಿಕೊಟ್ಟಿದ್ದು ಠಾಣಾ ಸಿಬ್ಬಂದಿಯವರಾದ ಚಂದ್ರ ಶಿವಾನಂದ ಮಹಾದೇವರ ವರು ಸಹಕರಿಸಿದರು. ವೇದಿಕೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ತಿಮ್ಮಯ್ಯ ಗೌಡರವರು ಉಪಸ್ಥಿತರಿದ್ದರು.