ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಮತಿಯವರು ದೀಪ ಬೆಳಗಿಸುವ ಮೂಲಕ ಯೋಗ ದಿನಾಚರಣೆಯ, ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕರಾದ ನಾರಾಯಣ ಎಸ್. ಕೆ ಹಾಗೂ ಸಹ ಶಿಕ್ಷಕರಾದ ಶ್ರೀಪತಿ ಭಟ್. ಐ ರವರು ಯೋಗಾಸನ ಪ್ರಾಣಯಾಮಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ದಿನದ ಕನಿಷ್ಠ ಅರ್ಧ ಗಂಟೆಯನ್ನಾದರೂ, ಯೋಗ, ಪ್ರಾಣಯಾಮಗಳಿಗೆ ಮೀಸಲಿಡುವಂತೆ ಸೂಚಿಸಿದರು. ನಂತರ ವಿದ್ಯಾರ್ಥಿಗಳು ದೈಹಿಕ ಶಿಕ್ಷಕರಾದ ಶ್ರೀ ಸುಧೀರ್ ಎಸ್. ಪಿ. ಯವರೊಂದಿಗೆ ಸೂರ್ಯ ನಮಸ್ಕಾರ, ಯೋಗಾಸನಗಳು ಹಾಗೂ ಪ್ರಾಣಯಾಮಗಳಲ್ಲಿ ಪಾಲ್ಗೊಂಡರು. ಎಲ್ಲಾ ಶಿಕ್ಷಕ, ಶಿಕ್ಷಕೇತರ ಬಂಧುಗಳು ಸಹಕರಿಸಿದರು.