ಕಡಬ : ನೂಜಿಬಾಳ್ತಿಲ ಬೆಥನಿ ಪ.ಪೂ ಕಾಲೇಜಿನಲ್ಲಿ ಜೂ. 21ರಂದು ವಿಶ್ವಯೋಗ ದಿನಾಚರಣೆ ಅಂಗವಾಗಿ ಯೋಗಾಸನಾ ಕಾರ್ಯಕ್ರಮ ನಡೆಯಿತು. ತಾ.ಪಂ ಸದಸ್ಯ ಗಣೇಶ್ ಕೈಕುರೆಯವರು ದೀಪ ಪ್ರಜ್ವಲನಗೊಳಿಸುವ ಮೂಲಕ ಯೋಗಾಸನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯೋಗದಿಂದ ಶರೀರದ ಆರೋಗ್ಯ ವೃದ್ಧಿಯಾಗುವುದರೊಂದಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ನಮ್ಮ ಜೀವನ ಪೂರ್ತಿ ಯೋಗ ಮಾಡುವ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಖಾದರ್ ಸಾಹೇಬ್ ಶುಭಹಾರೈಸಿದರು. ಸಂಸ್ಥೆಯ ಪ್ರಾಚಾರ್ಯ ಜಾರ್ಜ್ ಟಿ.ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಯೋಗದ ಮಹತ್ವವನ್ನು ವಿವರಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಯ ಸುಬ್ರಹ್ಮಣ್ಯ ಭಟ್ ಯೋಗ ನಡೆಸಿಕೊಟ್ಟರು. ವಿದ್ಯಾರ್ಥಿನಿ ದೀಪ್ತಿ ಪ್ರತಿಜ್ಞ ವಿಧಿ ಬೋದಿಸಿದರು. ವಿದ್ಯಾರ್ಥಿನಿ ಮಾನಸ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ತೋಮಸ್ ಎ.ಕೆ ವಂದಿಸಿ, ಮೋಕ್ಷಿತಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.
ಮಂತ್ರಿಗಳು, ಎಂಎಲ್ಎಗಳು ಸಮೇತ ಯೋಗಸನ ಮಾಡುತ್ತಿದ್ದು ಬೆಳಿಗ್ಗೆ ವಾಕಿಂಗ್ ಮಾಡುವ ಮೂಲಕ ಶರೀರದ ಒತ್ತಡವನ್ನು ಇಳಿಸಿ ಸಾರ್ವಜನಿಕವಾಗಿ ತಮ್ಮ ಕಾರ್ಯಕಲಾಪಗಳಲ್ಲಿ ತೊಡಗಿಸಿಕೊಳ್ಳುತ್ತಾರೆ -ಗಣೇಶ್ ಕೈಕುರೆ ತಾ.ಪಂ ಸದಸ್ಯರು