ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಟ್ಟಂಪಾಡಿ ವಲಯ, ಕಾಲೇಜು ಮತ್ತು ಹೈಸ್ಕೂಲು ಅಭಿವೃದ್ಧಿ ಸಮಿತಿ ಸ.ಪ.ಪೂ.ಕಾಲೇಜು ವೆಂಕಟನಗರ ಮತ್ತು ಯುವಶಕ್ತಿ ಹಿರಿಯ ವಿದ್ಯಾರ್ಥಿ ಸಂಘ ಸ.ಪ.ಪೂ.ಕಾಲೇಜು ವೆಂಕಟನಗರ ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಜೂ.24 ರಂದು ಮಧ್ಯಾಹ್ನ 2 ಗಂಟೆಗೆ ಸ.ಪ.ಪೂ.ಕಾಲೇಜು ವೆಂಕಟನಗರದಲ್ಲಿ ನಡೆಯಲಿದೆ.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉದ್ಘಾಟಿಸಲಿದ್ದು ಉಪನ್ಯಾಸಕ ಹರಿಪ್ರಕಾಶ್ ಬೈಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಭೌತಶಾಸ್ತ್ರ ಉಪನ್ಯಾಸಕಿ ನಿರ್ಮಲಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ, ಜನಜಾಗೃತಿ ವೇದಿಕೆಯ ತಾಲೂಕು ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪ್ರೌಢಶಾಲಾ ಮುಖ್ಯಸ್ಥೆ ಸಂದ್ಯಾರಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನಯ ವಸಂತ, ಜನಜಾಗೃತಿ ವೇದಿಕೆಯ ಬಲ್ನಾಡು ಗ್ರಾಮಾಧ್ಯಕ್ಷ ಎ.ಎಂ.ಪ್ರವೀಣ್ಚಂದ್ರ ಆಳ್ವ ಮುಂಡೇಲು, ಬಲ್ನಾಡು ಸಿ.ಎ.ಬ್ಯಾಂಕ್ ಅಧ್ಯಕ್ಷ ಎ.ಎಂ.ಪ್ರಕಾಶ್ಚಂದ್ರ ಆಳ್ವ ಮುಂಡೇಲು, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಮಹಾಬಲ ರೈ ಒಳತ್ತಡ್ಕ ಉಪಸ್ಥಿತರಿರುವರು ಎಂದು ಸಂಘಟಕರು ತಿಳಿಸಿದ್ದಾರೆ.