ಕಾವು : ಬುಶ್ರಾ ಎಜುಕೇಶನಲ್ ಟ್ರಸ್ಟ್ ಕಾವು ಮತ್ತು ಲಯನ್ಸ್ ಕ್ಲಬ್ ಕಾವು ಘಟಕ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ತೃಪ್ತಿ ಆಯುಶ್ ವೆಲ್ನೆಸ್ ಸೆಂಟರ್ ಸುಳ್ಯ ಇವರ ವತಿಯಿಂದ ನುರಿತ ಆಯುಶ್ ತಜ್ಞರಾದ ಡಾ| ಶಾಕಿರಾ ಸಲೀಂ ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಭಾರತ ಸರಕಾರದ ಆಯುಷ್ ಇಲಾಖೆಯ ಪ್ರಮಾಣೀಕೃತ ಆಯುರ್ವೇದ ಉತ್ಪನ್ನಗಳ ಮಾಹಿತಿ ಶಿಬಿರವು ಜೂ.24ರಂದು ಬೆಳಿಗ್ಗೆ ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಜ್ ಬುಶ್ರಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾವು ಲಯನ್ಸ್ ಕ್ಲಬ್ನ ಸ್ಥಾಪಕಾಧ್ಯಕ್ಷ ಹೇಮನಾಥ ಶೆಟ್ಟಿ, ಬಿನೋಯ್ ಜೋಸೆಫ್, ಸಲೀಂ ನೆಟ್ಟಣರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.