ಪುತ್ತೂರು: ಸರಕಾರಿ ಇಲಾಖೆಗಳಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ಸಾವ್ರತ್ರಿಕ ರಜೆ ಘೋಷಿಸಲಾಗಿದ್ದರೂ ಜೂನ್ 22ರಂದು ರಾಜ್ಯದ ಅಧೀನ ನ್ಯಾಯಾಲಯಗಳು ಎಂದಿನಂತೆ ಕಾರ್ಯ ನಿರ್ವಹಿಸಿದೆ.
ಶಿಕ್ಷಕರನ್ನು ಹೊರತುಪಡಿಸಿ ಇತರ ಸರಕಾರಿ ನೌಕರರಿಗೆ ಈಗಾಗಲೇ ಪ್ರತೀ ತಿಂಗಳ ಎಡರನೇ ಶನಿವಾರ ರಜೆ ಇದೆ. ಹೊಸದಾಗಿ ೪ನೇ ಶನಿವಾರವೂ ರಜೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದರ ಪ್ರಕಾರ ಅಧೀನ ನ್ಯಾಯಾಲಯಗಳಿಗೂ ರಜೆ ಇರಬೇಕಿದೆ. ಆದರೆ, ಈ ಬಗ್ಗೆ ಹೈಕೋರ್ಟ್ನ ಪೂರ್ಣ ಪೀಠದಲ್ಲಿ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಲ್ಲದೆ ಶನಿವಾರ ವ್ಯಾಜ್ಯಗಳ ವಿಚಾರಣೆ ನಿಗದಿಯಾಗಿದೆ. ಹಾಗಾಗಿ ಈ ಶನಿವಾರ ನ್ಯಾಯಾಲಯಗಳಿಗೆ ರಜೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿರುವ ಆರು ನ್ಯಾಯಾಲಯಗಳಲ್ಲಿಯೂ ೪ನೇ ಶನಿವಾರ ಕಲಾಪ ನಡೆದಿದೆ.