HomePage_Banner
HomePage_Banner
HomePage_Banner

ಬಿಳಿನೆಲೆ: ಕೈಕಂಬ ಉ.ಹಿ.ಪ್ರಾ.ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ಹಚ್ಚ ಹಸುರಿನ ಪರಿಸರದ ನಡುವೆ ಕಡುಕೆಂಪಿನ ವಸ್ತ್ಯ ಸಂಹಿತೆಯ ಶಿಸ್ತನೊಂದಿಗೆ ತುಂತುರು ಮಳೆರಾಯನನ್ನು ಜೊತೆಗೂಡಿಸಿಕೊಂಡು ಶಾಲಾ ಮುಂಬಾಗದಲ್ಲಿ ಪುಟ್ಟ ಪುಟ್ಟ ಮಕ್ಕಳೆಲ್ಲ ಸಾಮೂಹಿಕವಾಗಿ ವಿವಿಧ ಭಂಗಿಯ ಆಸನಗಳನ್ನು ಮಾಡುತ್ತಾ ವಿಶ್ವ ಯೋಗ ದಿನದ ಆಚರಣೆಯನ್ನು ಜೂ. 21ರಂದು ಬಿಳಿನೆಲೆ ಕೈಕಂಬ ಉ.ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಸಿ ಸಂಭ್ರಮಿಸಿದರು. ಯೋಗ ಶಿಕ್ಷಕ ವಿಜೇಶ್ ಬಿಳಿನೆಲೆರವರ ಮಾರ್ಗದರ್ಶನದಲ್ಲಿ ನಡೆದ ಯೋಗವನ್ನು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ತಮ್ಮ ಶಾಲೆಯಲ್ಲಿ ಕಳೆದ 3 ವರ್ಷಗಳಿಂದ ಯೋಗ ತರಗತಿಗಳನ್ನು ನಡೆಸುತ್ತಿದ್ದೇವೆ ಎಂದರು. ಶಿಕ್ಷಕಿ ವನಿತಾರವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ್ದು ವಿದ್ಯಾರ್ಥಿಗಳು ಯೋಗಪ್ರಾರ್ಥನೆ, ಯೋಗಗೀತೆ, ಸೂರ್‍ಯನಮಸ್ಕಾರ, ಸೇರಿದಂತೆ ಹಲವಾರು ಯೋಗ ಆಸನಗಳನ್ನು ಸಾಮೂಹಿಕವಾಗಿ ಮಾಡುವ ಮೂಲಕ ಎಲ್ಲರ ಗಮನಸೆಳೆದರು. ಶಾಲಾ ಎಸ್‌ಡಿಎಂಸಿ ಸದಸ್ಯರಾದ ಹೂವಪ್ಪಗೌಡ, ಯಶೋದರ ಶೆಟ್ಟಿ ಗದ್ದೆ, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಪವಿತ್ರ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಗಾಯತ್ರಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.