ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಜೂ. 21ರಂದು 5ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಮಾಡಲಾಯಿತು.
ಪ್ರಸಿದ್ಧ ಸಂಗೀತ ಕಲಾವಿದ ಕೆ.ವಾಸುದೇವ ಕಾರಂತರವರು ದೀಪೋಜ್ವಲನೆ ಮಾಡಿದರು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಪ್ರೀತ ಕುಳ್ಳಾಜೆಯವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ, ಯೋಗ ಶಿಕ್ಷಕರೂ ಆದ ಹರ್ಷ ಕುಮಾರ್ ಕೆ.ಎನ್.ರವರು ಶಿಬಿರ ಗೀತೆಯೊಂದಿಗೆ ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ ರಾಜಶೇಖರಪ್ಪ, ಶಿಕ್ಷಕಿಯರಾದ ಪವಿತ್ರ, ಮಹಾಲಕ್ಷ್ಮೀ ಉಪಸ್ಥತರಿದ್ದರು. ಶಿಕ್ಷಕಿ ಭಾಗ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಾರಿಜ ಸ್ವಾಗತಿಸಿ, ಶಿಕ್ಷಕಿ ವಂದನಾ ವಂದಿಸಿದರು.