Home_Page_Advt
Home_Page_Advt
Home_Page_Advt

ಜೂ.23ಕ್ಕೆ ಎನ್.ಸುಧಾಕರ್ ಶೆಟ್ಟಿ ನೇತೃತ್ವದ ವ್ಯವಸ್ಥಾಪನಾ ಸಮಿತಿ ನಿರ್ಗಮನ ಪ್ರಯುಕ್ತ ಸಮಿತಿಗೆ ಅಭಿನಂದನಾ ಸಮಾರಂಭ

Puttur_Advt_NewsUnder_1
Puttur_Advt_NewsUnder_1

 ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 3 ವರ್ಷಗಳಿಂದ ಎನ್.ಸುಧಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ವ್ಯವಸ್ಥಾಪನಾ ಸಮಿತಿ ಜೂ. 23ಕ್ಕೆ ಅಂತಿಮಗೊಳ್ಳಲಿದ್ದು, 3 ವರ್ಷದ ಅವಧಿಯಲ್ಲಿ ದೇವಳದ ಉತ್ತಮ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ದೇವಳದ ಅರ್ಚಕರು, ಸಿಬಂದಿಗಳು, ನೌಕರರು, ನಿತ್ಯ ಕರಸೇವಕರಿಂದ ನಿರ್ಗಮಿಸುತ್ತಿರುವ ವ್ಯವಸ್ಥಾಪನಾ ಸಮಿತಿಗೆ ಅಭಿನಂದನೆ ಸಮಾರಂಭ ಜೂ. 22ರಂದು ದೇವಳದ ಸಭಾಭವನದಲ್ಲಿ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಸದಸ್ಯರಾದ ಜಾನು ನಾಯ್ಕ, ಯು.ಪಿ.ರಾಮಕೃಷ್ಣ, ಎನ್.ಕರುಣಾಕರ ರೈ, ಸಂಜೀವ ನಾಯಕ್ ಕಲ್ಲೇಗ, ರೋಹಿಣಿ ಆಚಾರ್ಯ, ನಯನಾ ರೈ, ಪ್ರಧಾನ ಅರ್ಚಕರು, ಸದಸ್ಯರೂ ಆಗಿರುವ ವಸಂತ ಕೆದಿಲಾಯ ರವರಿಗೆ ದೇವಳದ ಅರ್ಚಕರು, ಸಿಬಂದಿಗಳು, ನಿತ್ಯಕರಸೇವಕರು ಸ್ಮರಣಿಕೆ, ಫಲಪುಷ್ಪ ಶಾಲು ಹೊದೆಸಿ ಸನ್ಮಾನಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಚೇರಿ ವ್ಯವಸ್ಥಾಪಕ ಜಗದೀಶ್, ಪಿ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ್ ರಾವ್, ರಾಮಚಂದ್ರ ಘಾಟೆ, ಪ್ರಧಾನ ಅರ್ಚಕವಿ. ಎಸ್ ಭಟ್, ಅರ್ಚಕರಾದ ಜಯರಾಮ ಜೋಯಿಷ, ನಿತ್ಯ ಕರಸೇವಕ ಹರೀಶ್ ಪೈ, ನಾರಾಯಣ ಸಗ್ರಿತ್ತಾಯ, ರೇಖಾ, ಭಾರತಿ ಸೇರಿದಂತೆ ಹಲವಾರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.