ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸಂಚಾಲಕ ಅಬ್ರಹಾಂ ವರ್ಗೀಸ್ರವರ ಮಾರ್ಗದರ್ಶನದಲ್ಲಿ ಜೂ.21ರಂದು ವಿಶ್ವಯೋಗದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗಶಿಕ್ಷಕ, ನಿವೃತ್ತ ಮುಖ್ಯಗುರು ಆರ್. ವೆಂಕಟ್ರಮಣರವರು ಮಾತನಾಡಿ, ಯೋಗ ಬದುಕಿನ ಕಲೆಯಾಗಿದೆ, ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನು ನಮ್ಮದಾಗಿಸಿಕೊಳ್ಳಬಹುದು, ಯೋಗ ಮನುಷ್ಯನ ವ್ಯಕ್ತಿತ್ವದ ಸಮಗ್ರ ವಿಕಾಸ ಮಾಡುತ್ತದೆ ಎಂದರು. ದೈ.ಶಿ. ಶಿಕ್ಷಕ ಮಹಮ್ಮದ್ ಹಾರೀಸ್ರವರು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಪ್ರಾಚಾರ್ಯ ಎಂ. ಕೆ. ಏಲಿಯಾಸ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸರೋಜಕುಮಾರಿ ಎಂ. ಶುಭ ಹಾರೈಸಿದರು. ಕಾರ್ಯಕ್ರಮ ಸಂಯೋಜಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಶಿಕ್ಷಕ ತೋಮಸ್ ಎಂ.ಐ. ಸ್ವಾಗತಿಸಿ, ಶಿಕ್ಷಕ ಕರುಣಾಕರರವರು ಕಾರ್ಯಕ್ರಮ ನಿರೂಪಿಸಿದರು.