ಮರ್ದಾಳ: ಮರ್ದಾಳ-ಬಂಟ್ರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಸಹಕಾರದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಟೈ ಹಾಗೂ ಬೆಲ್ಟ್ ವಿತರಣೆ ಜೂ.21ರಂದು ನಡೆಯಿತು.
ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲತಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.,ಯವರು ಉದ್ಘಾಟಿಸಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಉಮೇಶ್ ಕೆ.ಎನ್.,ರವರು ಟೈ, ಬೆಲ್ಟ್ ಹಾಗೂ ಗುರುತಿನ ಚೀಟಿ ವಿತರಿಸಿದರು. ತಾ.ಪಂ.ಸದಸ್ಯೆ ಕುಸುಮ ಪಿ.ವೈ., ಸುಬ್ರಹ್ಮಣ್ಯ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಭರತ್ ನೆಕ್ರಾಜೆ, ನಿಯೋಜಿತ ಝೋನಲ್ ಲೆಫ್ಟಿನೆಂಟ್ ಗಿರಿಧರ ಸ್ಕಂದ, ಎಸ್ಡಿಎಂಸಿ ಅಧ್ಯಕ್ಷ ಗೋಪಿನಾಥ್ ಪದಕಂಡರವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸುಜಾತ, ಸವಿತಾರವರು ಯೋಗಾಭ್ಯಾಸ ನಡೆಸಿಕೊಟ್ಟರು. ಶಾಲಾ ಮುಖ್ಯಶಿಕ್ಷಕಿ ದೇವಕಿ ಸ್ವಾಗತಿಸಿ, ಶಿಕ್ಷಕ ರಾಮಕೃಷ್ಣ ಮಲ್ಲಾರ ವಂದಿಸಿದರು. ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.